ಮಂಗಳೂರು: ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ದಿನಗಳ ಆತಿಥ್ಯ ನಿರ್ವಹಣೆ ಜವಾಬ್ದಾರಿಯನ್ನು ಮಂಗಳೂರು ಮೂಲದ ಸುಮಲ್ ಕೋಟ್ಯಾನ್ ನಿರ್ವಹಿಸಿದ್ದಾರೆ.
ಪ್ರಧಾನಿಯವರ ಆಹಾರ ಸುರಕ್ಷೆ ಸೇರಿದಂತೆ ಹಲವು ವಿಚಾರಗಳ ಜವಾಬ್ದಾರಿ ಅವರದಾಗಿತ್ತು. ಈ ಹಿಂದೆಯೂ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ನೀಡಿದ್ದಾಗ ಸುಮಲ್ ಆತಿಥ್ಯ ನಿರ್ವಹಣೆ ಮಾಡಿದ್ದರು.
ಪ್ರಧಾನಿ ಅಮೆರಿಕ ಭೇಟಿ ವೇಳೆ ಆತಿಥ್ಯದ ಮುಖ್ಯ ನೇತೃತ್ವವನ್ನು ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೊಟೇಲ್ ಉದ್ಯಮಿ ಆನಂದ್ ಪೂಜಾರಿ ವಹಿಸಿದ್ದರು. ಅವರ ಸಲಹೆಯ ಮೇರೆಗೆ ಸುಮಲ್ ಆತಿಥ್ಯ ನಿರ್ವಹಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ.
ಇದನ್ನೂ ಓದಿ:ಶಿರಾಡಿ ರಸ್ತೆ ಎಲ್ಲ ವಾಹನಗಳಿಗೆ ಮುಕ್ತ
ಮಂಗಳೂರಿನ ಮೇರಿಹಿಲ್ ನಿವಾಸಿಗಳಾದ ಗೋಪಾಲ್ ಪೂಜಾರಿ ಹಾಗೂ ಸುಪಲ ದಂಪತಿಯ ಪುತ್ರಿಯಾಗಿರುವ ಸುಮಲ್ 10 ವರ್ಷಗಳಿಂದ ಅಮೆರಿಕದ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಸಂದೀಪ್ ಕೋಟ್ಯಾನ್ ಕೂಡ ಅಲ್ಲಿನ ಐಟಿ ಕಂಪೆನಿ ಉದ್ಯೋಗಿಯಾಗಿದ್ದಾರೆ.