Advertisement

ಮುಂದಿನ ವಾರ ಜಪಾನ್‌ಗೆ ಪ್ರಧಾನಿ ಮೋದಿ ಭೇಟಿ

02:07 AM Jun 22, 2019 | Team Udayavani |
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.28, 29ರಂದು ಜಪಾನ್‌ಗೆ ಭೇಟಿ ನೀಡಲಿದ್ದಾರೆ. ಆ ದೇಶದ ಒಸಾಕಾದಲ್ಲಿ ಆಯೋಜಿಸಲಾಗಿರುವ 14ನೇ ಆವೃತ್ತಿಯ ಜಿ-20 ರಾಷ್ಟ್ರಗಳ ಸಮ್ಮೇಳನದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ವಿಶ್ವ ವಾಣಿಜ್ಯ ಸಂಘಟನೆ ಸುಧಾರಣೆ, ಕಪ್ಪುಹಣ ಹರಿವಿನ ತಡೆಗೆ ಕ್ರಮ, ಆರ್ಥಿಕ ದೃಢತೆ, ಭಯೋತ್ಪಾದನೆ ವಿರುದ್ಧ ಕ್ರಮ ಸೇರಿದಂತೆ ಹಲವು ವಿಚಾರಗಳ ಕ್ರಮಗಳ ಬಗ್ಗೆ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಐರೋಪ್ಯ ಒಕ್ಕೂಟ ಮತ್ತು ಇತರ ಆಹ್ವಾನಿತ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ಚರ್ಚೆ ನಡೆಸಲಿದ್ದಾರೆ. ಜಿ 20 ಶೃಂಗದಲ್ಲಿ ಭಾರತದ ಶೆರ್ಪಾ ಆಗಿ ಸಚಿವ ಸುರೇಶ್‌ ಪ್ರಭು ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next