Advertisement

23 ಭಾಷೆಗಳ ಶರಣರ ವಚನ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

12:19 PM Apr 29, 2017 | Sharanya Alva |

ನವದೆಹಲಿ:ಜಗತ್ತಿನ ಮೂಲೆ, ಮೂಲೆಗೂ ಬಸವಣ್ಣನವರ ವಚನಗಳನ್ನು ಪಸರಿಸಬೇಕಿದೆ. ಇಂತಹ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿಸಬೇಕು. ಉತ್ತಮ ಆಡಳಿತ, ಅಹಿಂಸೆ ಬಗ್ಗೆ, ಮಾನವತಾವಾದದ ಬಗ್ಗೆ ವಿಚಾರಧಾರೆಯನ್ನು ಹರಿಸಿದಿ ಮಹಾನ್ ವ್ಯಕ್ತಿ ಬಸವಣ್ಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

Advertisement

ಶನಿವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ಬಸವ ಜಯಂತಿ ಅಂಗವಾಗಿ ಬಸವಣ್ಣ ಸೇರಿದಂತೆ 173 ಶರಣರ ವಚನಗಳ ಅನುವಾದದ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದೇಶದಲ್ಲಿ ಮೊದಲ ಸಂಸತ್ ಕಲ್ಪನೆ ಜಾರಿಗೆ ತಂದ ವ್ಯಕ್ತಿ ಬಸವಣ್ಣ. ಅನುಭವ ಮಂಟಪದಲ್ಲಿ ವಿಚಾರ ಕ್ರಾಂತಿಯ ಹೊಸ ಕಲ್ಪನೆ ಹುಟ್ಟು ಹಾಕಿದ ಮಹಾನ್ ದಾರ್ಶನಿಕ ಬಸವಣ್ಣ ಎಂದು ಹೇಳಿದರು.

ಭಾರತದಲ್ಲಿ ಬೇರೆ, ಬೇರೆ ಸಂದರ್ಭಗಳಲ್ಲಿ ಇಂತಹ ದಾರ್ಶನಿಕರ ಆಗಮನ ಆಗಿದೆ. ಭಾರತದ ಇತಿಹಾಸ ಕೇವಲ ಸೋಲಿನ ಇತಿಹಾಸವಲ್ಲ, ಸಂಘರ್ಷದ ಇತಿಹಾಸವಲ್ಲ. ಭಾರತ ಇಡೀ ವಿಶ್ವಕ್ಕೆ ಮಾನವೀಯತೆ ಮತ್ತು ಅಹಿಂಸೆಯ ಸಂದೇಶ ಸಾರಿದ ಇತಿಹಾಸ ಹೊಂದಿದ ದೇಶವಾಗಿದೆ ಎಂದರು.

ಮಾಜಿ ಉಪರಾಷ್ಟ್ರಪತಿ ಬಿಡಿ ಜತ್ತಿ ಅವರ ಪುತ್ರ ಅರವಿಂದ ಜತ್ತಿ ರಾಜಕಾರಣಿಗಳ ಕುಟುಂಬಕ್ಕೆ ಮಾದರಿಯಾಗಬೇಕು ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಶರಣರ ವಚನಗಳ ಅನುವಾದದ ಸಂಪಾದಕರಾಗಿದ್ದ ದಿ. ಎಂಎಂ ಕಲ್ಬುರ್ಗಿ ಹಾಗೂ ಅರವಿಂದ್ ಜತ್ತಿ ಅವರಿಗೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next