Advertisement
ಧಾರವಾಡದಲ್ಲಿ ಜ.12-16ರ ವರೆಗೆ ಉತ್ಸವ ನಡೆಯಲಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಪ್ರಧಾನಿ ಮೋದಿಯವರ ಪಾಲ್ಗೊಳ್ಳುವಿಕೆ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
Related Articles
ಉದ್ಘಾಟನ ಕಾರ್ಯಕ್ರಮದಲ್ಲಿ ಪ್ರಧಾನಿ, ಕೇಂದ್ರ ಸಚಿವರು ಹಾಗೂ ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಒಟ್ಟು 25 ಜನ ಗಣ್ಯರು ಭಾಗವಹಿಸುವರು. ವಿವಿಧ ರಾಜ್ಯಗಳ ಸುಮಾರು 5,700ಕ್ಕೂ ಹೆಚ್ಚು ಮಂದಿ ಯುವಜನರಲ್ಲದೇ, ಪೋರ್ಟಲ್‌ನಲ್ಲಿ ನೋಂದಣಿ ಮಾಡಿದ ಸುಮಾರು 25 ಸಾವಿರ ಮಂದಿ ಯುವಜನರಿಗೂ ಪಾಲ್ಗೊಳ್ಳಲು ಅವಕಾಶ ಒದಗಿಸಲಾಗಿದೆ.
Advertisement
ಏನೇನು ಕಾರ್ಯಕ್ರಮ?ಜಾನಪದ ನೃತ್ಯ, ಯುವ ಸಮ್ಮೇಳನ, ದೇಶೀಯ ಕ್ರೀಡೆಗಳು, ಆಹಾರ ಮೇಳ, ಜಾನಪದ ಹಾಡುಗಳ ಗಾಯನ, ಜಲ ಸಾಹಸ ಕ್ರೀಡೆಗಳು, ಯುವ ಕಲಾವಿದರ ಶಿಬಿರ, ಯುವ ಕೃತಿ ವಿಶೇಷ ಕಾರ್ಯ ಕ್ರಮ, ಯೋಗ ಥಾನ್, ಸಾಹಸ ಕ್ರೀಡೆ ಕಾರ್ಯಾಗಾರ ವಿವಿಧ ಕಾಲೇಜು, ರಂಗಮಂದಿರ ಹಾಗೂ ಕ್ರೀಡಾ ಮೈದಾನ ಗಳಲ್ಲಿ ನಡೆಯ ಲಿದೆ. ಜ. 16 ರಂದು ಕೆಸಿಡಿ ಕಾಲೇಜಿ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.