Advertisement

ಜಗತ್ತಿನ ಅತಿದೊಡ್ಡ ಹೆದ್ದಾರಿ ಸುರಂಗ; ಅಟಲ್ ಸುರಂಗ ಮಾರ್ಗ ಲೋಕಾರ್ಪಣೆ

10:55 AM Oct 03, 2020 | Nagendra Trasi |

ನವದೆಹಲಿ: ಪ್ರಪಂಚದಲ್ಲೇ ಅತಿದೊಡ್ಡ ಹೆದ್ದಾರಿ ಸುರಂಗ ಮಾರ್ಗ ಎಂಬ ಖ್ಯಾತಿ ಪಡೆದಿರುವ ಅಟಲ್ ಸುರಂಗ ಮಾರ್ಗದಲ್ಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಅಕ್ಟೋಬರ್ 03, 2020) ವಿಧ್ಯುಕ್ತವಾಗಿ ಚಾಲನೆ ನೀಡಿದರು.

Advertisement

ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್ ನ ಅಡಿಯಲ್ಲಿ ನಿರ್ಮಾಣವಾಗಿರುವ 9.02 ಕಿಲೋ ಮೀಟರ್ ಉದ್ದದ ಅಟಲ್ ಸುರಂಗ ಮಾರ್ಗ ಭಾರತದ ಪಾಲಿಗೆ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವಪೂರ್ಣವಾಗಿದೆ.

ಚಳಿಗಾಲದ ಸಮಯದಲ್ಲಿ ಭಾರತದ ಇತರೆ ಪ್ರದೇಶದೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದ ಪ್ರದೇಶಗಳಿಗೆ ಈ ಸುರಂಗ ಮಾರ್ಗ ಸರ್ವ ಋತುವಲ್ಲೂ ಸಂಚಾರ ಸೇವೆ ಕಲ್ಪಿಸಲಿದೆ. ಲಡಾಖ್ ನಲ್ಲಿ ಸೈನಿಕರಿಗೆ ತ್ವರಿತವಾಗಿ ಶಸ್ತ್ರಾಸ್ತ್ರ ಮತ್ತು ಆಹಾರ ಸಾಮಗ್ರಿಯನ್ನು ತಲುಪಿಸಲು ಈ ಸುರಂಗಮಾರ್ಗ ಬಳಕೆಯಾಗಲಿದೆ.

ಸುಮಾರು ಹತ್ತು ಸಾವಿರ ಅಡಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಈ ಮೊದಲಿನ ಅಂದಾಜಿನ ಪ್ರಕಾರ ಆರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಇದೀಗ ಬರೋಬ್ಬರಿ ಹತ್ತು ವರ್ಷಗಳ ನಂತರ ಸುರಂಗ ಮಾರ್ಗ ಪೂರ್ಣಗೊಂಡಿದ್ದು, ಇದು 9.2 ಕಿಲೋ ಮೀಟರ್ ದೂರ ಹೊಂದಿದೆ ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ಹತ್ರಾಸ್ ಪ್ರಕರಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ನಾಲ್ವರು ಪೊಲೀಸರ ಅಮಾನತು

Advertisement

ಅಟಲ್ ಸುರಂಗ ಇದು ಮನಾಲಿ ಮತ್ತು ಲೇಹ್ ಅನ್ನು ಸಂಪರ್ಕಿಸಲಿದ್ದು, ವಿಶ್ವದ ಅತೀ ಉದ್ದದ ಹೆದ್ದಾರಿ ಸುರಂಗ ಮಾರ್ಗವಾಗಿದೆ. ಪ್ರತಿ 60 ಮೀಟರ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ, ಸುರಂಗದ ಒಳಮಾರ್ಗದ ಪ್ರತಿ 500 ಮೀಟರ್ ಅಂತರದಲ್ಲಿ ತುರ್ತು ಸುರಂಗ ಮಾರ್ಗ ಕೊರೆಯಲಾಗಿದೆ ಎಂದು ಮುಖ್ಯ ಇಂಜಿನಿಯರ್ ಕೆಪಿ ಪುರುಷೋತ್ತಮನ್ ವಿವರಿಸಿದ್ದಾರೆ.

ಈ ಸುರಂಗ ಮಾರ್ಗದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿಲೋ ಮೀಟರ್ ಗಳಷ್ಟು ದೂರವನ್ನು ಕಡಿಮೆಗೊಳಿಸಿದೆ. ಅಲ್ಲದೇ ನಾಲ್ಕು ಗಂಟೆಗಳ ಅವಧಿ ಪ್ರಯಾಣಿಕರಿಗೆ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next