ನವದೆಹಲಿ: ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ರೈಲು ಲೋಕಾರ್ಪಣೆಗೊಳ್ಳಲು ಕ್ಷಣಗಣನೆ ಆರಂಭಗೊಂಡಿದ್ದು, ನಾಳೆ (ಡಿಸೆಂಬರ್ 28) ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ.
ಈ ಕುರಿತು ದೆಹಲಿಯ ಮೆಟ್ರೋ ಕಾರ್ಪೋರೇಶನ್ (DMRC) ಮಾಹಿತಿ ನೀಡಿದ್ದು, ಈ ರೈಲು ಚಾಲಕ ರಹಿತವಾಗಿದ್ದು ಸ್ವಯಂ ಚಾಲಿತವಾಗಿದೆ. ಈ ರೈಲು 37 ಕಿ.ಮೀ ಉದ್ದದ ಮೆಜೆಂಟಾ ಲೈನ್ ಅನ್ನು ಒಳಗೊಂಡಿದ್ದು, ದೇಶದ ಮೊದಲ ಸ್ವಯಂ ಚಾಲಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದನ್ನೂ ಓದಿ:
‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ದಂಪತಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಈ ರೈಲಿನಲ್ಲಿ ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಅಳಡಿಸಲಾಗಿದ್ದು, ಚಾಲಕ ಸಹಿತ ರೈಲುಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಬಹುದಾಗಿದೆ. ಏಸಿ ಮೂಲಕ ಕೋವಿಡ್ ಹರಡುತ್ತದೆ ಎಂಬ ಆತಂಕವನ್ನು ದೂರ ಮಾಡಲು ಈ ರೈಲಿನಲ್ಲಿ ಕಾಂಟ್ಯಾಕ್ಟ್ ಲೆಸ್ ಸೇವೆಗಳನ್ನು ಅಳವಡಿಸಲಾಗಿದೆ ಎಂದಿದೆ.
ದೆಹಲಿ ಮೆಟ್ರೋ ಭಾರತದ ಅತಿ ದೊಡ್ಡ ಮೆಟ್ರೋ ಸೇವೆ ಆಗಿದ್ದು, ಕೋಲ್ಕತಾ ಮೆಟ್ರೋನ ನಂತರ ದೇಶದ ಅತ್ಯಂತ ಹಳೆಯ ಮೆಟ್ರೋ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ದೆಹಲಿ ಮೆಟ್ರೋ ಚಾಲಕ ರಹಿತ ರೈಲುಗಳು ಡಿ ಎಮ್ ಆರ್ ಸಿ ಯ ಮೂರನೇ ಹಂತದ ಭಾಗವಾಗಿ ತಯಾರಿಸಲಾದ ಮೆಜೆಂಟಾ ಲೈನ್ ಹಾಗೂ ಪಿಂಕ್ ಲೈನ್ ಗಳಲ್ಲಿ ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ:
ಮಾರ್ಗಸೂಚಿ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ:ಡಿಸಿ ನಿತೇಶ
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೆಟ್ರೋ ರೈಲಿನ ಲೋಕಾರ್ಪಣೆಯ ಜೊತೆಗೆ ಏರ್ ಪೋರ್ಟ್ ಎಕ್ಸ್ ಪ್ರೆಸ್ ಲೈನ್ ನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಅನುಮತಿಸುವ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಅನ್ನೂ ಬಿಡುಗಡೆ ಮಾಡಲಿದ್ದಾರೆ ಎಂದು ಡಿ ಎಮ್ ಆರ್ ಸಿ ತಿಳಿಸಿದೆ.