Advertisement

ಮಾ. 30ಕ್ಕೆ ಬಿಮ್‌ಸ್ಟೆಕ್ ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

09:15 PM Mar 26, 2022 | Team Udayavani |

ನವದೆಹಲಿ: ಏಳು ರಾಷ್ಟ್ರಗಳ ಪ್ರಾತಿನಿಧ್ಯವಿರುವ “ಬಿಮ್‌ಸ್ಟೆಕ್‌’ (ಬೇ ಆಫ್ ಬೆಂಗಾಲ್‌ ಇನಿಷಿಯೇಟಿವ್‌ ಫಾರ್‌ ಮಲ್ಟಿ- ಸೆಕ್ಟರಲ್‌ ಟೆಕ್ನಿಕಲ್‌ ಆ್ಯಂಡ್‌ ಎಕನಾಮಿಕ್‌ ಕೊಆಪರೇಷನ್‌) ಸಂಘಟನೆಯ ವಚ್ಯುವಲ್‌ ಸಮ್ಮೇಳನವು ಮಾ. 30ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

Advertisement

ವಿದೇಶಾಂಗ ಸಚಿವಾಲಯ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಪ್ರಸ್ತುತ “ಬಿಮ್‌ಸ್ಟೆಕ್‌’ನ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಶ್ರೀಲಂಕಾ, ಈ ಸಮ್ಮೇಳನವನ್ನು ಆಯೋಜಿಸಿದ್ದು ಅಧ್ಯಕ್ಷತೆಯನ್ನೂ ಅದೇ ರಾಷ್ಟ್ರ ವಹಿಸಿಕೊಂಡಿದೆ.

ಇದನ್ನೂ ಓದಿ :ಸಾವಿರಾರು ಜನ ಸಂಚರಿಸುವ ರಸ್ತೆಯಲ್ಲೆ ಕಳಚಿ ಬಿದ್ದ ವಿದ್ಯುತ್ ತಂತಿ : ತಪ್ಪಿದ ಭಾರಿ ಅನಾಹುತ

“ಬಿಮ್‌ಸ್ಟೆಕ್‌’ನಲ್ಲಿ ಭಾರತ, ಶ್ರೀಲಂಕಾ ಜೊತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್‌, ಥಾಯ್ಲೆಂಡ್‌, ನೇಪಾಳ ಹಾಗೂ ಭೂತಾನ್‌ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next