ನವದೆಹಲಿ: ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳು, ತಮ್ಮಲ್ಲಿ ಹೊಂದಿರುವ ಅಂಕಿ-ಅಂಶಗಳನ್ನು, ಮಾಹಿತಿಗಳನ್ನು ಮಹಾಲೇಖಪಾಲರು (ಸಿಎಜಿ) ಕೇಳಿದಾಗ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಸಿಎಜಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಆಡಿಟ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “”ದೇಶದ ಎಲ್ಲಾ ಇಲಾಖೆಗಳಲ್ಲಿ, ವಲಯಗಳಲ್ಲಿ ಇರುವ ಅಂಕಿ-ಅಂಶಗಳು, ಭವಿಷ್ಯದಲ್ಲಿ ದೇಶದ ಇತಿಹಾಸವನ್ನು ಸಾರುತ್ತವೆ. ಈ ಅಂಕಿ-ಅಂಶಗಳನ್ನು ಕರಾರುವಾಕ್ ಆಗಿ, ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಮಾತ್ರ ನಾವು ಸದೃಢ ಮತ್ತು ಪಾರದರ್ಶಕ ಆಡಳಿತ ನೀಡಲು ಸಾಧ್ಯ” ಎಂದು ತಿಳಿಸಿದ್ದಾರೆ.
“ವಿಶ್ವದಲ್ಲಿ ಅತಿ ಹೆಚ್ಚು ಸ್ಟಾರ್ಟಪ್ ಗಳನ್ನು ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಆದರೆ, ಇದರ ನಡುವೆಯೇ, ಸರ್ಕಾರಿ ಕಚೇರಿಗಳಲ್ಲಿನ ಕೆಲಸದ ಶೈಲಿಗಳಲ್ಲಿಯೂ ಗಮನಾರ್ಹ ಬದಲಾವಣೆಯಾಗಬೇಕು.
ಇದನ್ನೂ ಓದಿ:ಉತ್ತರ ಪ್ರದೇಶದ ಹೆಮ್ಮೆ “ಪೂರ್ವಾಂಚಲ ಎಕ್ಸ್‌ಪ್ರೆಸ್ ವೇ’
ಪ್ರಮಾಣಪತ್ರಗಳು ಸ್ವಯಂಚಾಲಿತ ನವೀಕರಣ, ಆನ್‌ಲೈನ್ ಮೂಲಕ ದಾಖಲೆಗಳು, ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವಿಕೆ ಅಥವಾ ಸರ್ಕಾರಿ ಸೇವೆಗಳನ್ನು ಪಡೆಯುವಂಥ ಸೌಲಭ್ಯಗಳು ಎಲ್ಲೆಲ್ಲೂ ಬರಬೇಕು” ಎಂದು ಅವರು ತಿಳಿಸಿದರು.