ನವದೆಹಲಿ: ಇಂದು ಬೆಳಿಗ್ಗೆ ಉಕ್ರೇನ್ ನ ಖಾರ್ಕಿವ್ ನಲ್ಲಿ ಶೆಲ್ ದಾಳಿಗೆ ಬಲಿಯಾದ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ಅವರ ತಂದೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೊಬೈಲ್ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ಪುತ್ರನನ್ನು ಕಳೆದುಕೊಂಡ ಕುಟುಂಬದ ಜೊತೆ ಪ್ರಧಾನಿ ಮೋದಿ ದೂರವಾಣಿ ಕರೆ ಮೂಲಕ ಮಾತನಾಡಿದ ಅವರು ಈ ಘಟನೆಗೆ ತೀವ್ರ ನೋವು ವ್ಯಕ್ತಪಡಿಸಿದ ಪ್ರಧಾನಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಪುತ್ರನ ಕಳೆದ ಕೊಂಡ ನೋವಿನಲ್ಲಿ ತಂದೆ ಶೇಖರ ಗೌಡ ಪ್ರಧಾನಿ ಮೋದಿ ಮಾತುಗಳನ್ನು ಆಲಿಸಿ ಕಣ್ಣೀರು ಹಾಕುತ್ತಲೆ ನನ್ನ ಮಗನ ಪಾರ್ಥೀವ ಶರೀರವನ್ನು ಆದಷ್ಟು ಬೇಗನೆ ಕರ್ನಾಟಕಕ್ಕೆ ತರಲು ಸಹಾಯ ಮಾಡಿ ಎಂದು ಮೋದಿ ಅವರಲ್ಲಿ ಮನವಿ ಮಾಡಿರುವುದಾಗಿ ವರದಿ ತಿಳಿಸಿದೆ.
ನವೀನ್ ಪಾರ್ಥೀವ ಶರೀರವನ್ನು ಮರಳಿ ಭಾರತಕ್ಕೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
“ನನಗೆ ಅವರ ಕುಟುಂಬ ತಿಳಿದಿದೆ. ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ಪ್ರಧಾನಿ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಪಾರ್ಥೀವ ಶರೀರವನ್ನು ಮರಳಿ ಭಾರತಕ್ಕೆ ತರಲು ನಾವು ಪ್ರಯತ್ನಿಸುತ್ತೇವೆ.
ರಷ್ಯಾ ದಾಳಿಗೆ ಉಕ್ರೇನ್ ಜನತೆ ಭಯಭೀತರಾಗಿದ್ದಾರೆ.ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದಾರೆ.ಅದರಲ್ಲಿ ಕರ್ನಾಟಕದವರು ಸಹ ಇದ್ದಾರೆ.