ಭೋಪಾಲ್: ತಮ್ಮ 72ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಸೆ. 17) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್ ಗೆ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ 72ನೇ ಹುಟ್ಟುಹಬ್ಬ ಸಂಭ್ರಮ: ಗಣ್ಯರಿಂದ ಶುಭಾಶಯಗಳ ಮಹಾಪೂರ
ಮಧ್ಯಪ್ರದೇಶದ ಕುನೋ ಉದ್ಯಾನವನದಲ್ಲಿ ಎಂಟು ಚೀತಾಗಳು ಸೇರಿಕೊಂಡಂತಾಗಿದ್ದು, ಇದರಲ್ಲಿ ಐದು ಹೆಣ್ಣು, ಮೂರು ಗಂಡು ಚೀತಾಗಳಿವೆ. ಭಾರತದ ಕಾಡುಗಳಿಂದ ಸುಮಾರು 70 ವರ್ಷಗಳಿಂದ ಕಣ್ಮರೆಯಾಗಿದ್ದ ಚೀತಾಗಳು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನವೇ ವಾಪಸ್ ಭಾರತದ ಕಾಡು ಸೇರಿದಂತಾಗಿದೆ.
Related Articles
ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಬಿ747 ಜಂಬೋ ಜೆಟ್ ವಿಮಾನದ ಮೂಲಕ ಎಂಟು ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಬರೋಬ್ಬರಿ 8,400 ಕಿಲೋ ಮೀಟರ್ ಪ್ರಯಾಣದ ಮೂಲಕ ಚೀತಾಗಳನ್ನು ಕರೆತರಲಾಗಿತ್ತು.