Advertisement

BJP Manifesto ಬಿಡುಗಡೆ ಮಾಡಿದ ಮೋದಿ; ಬಿಜೆಪಿ ಸಂಕಲ್ಪ ಪತ್ರದಲ್ಲಿ ಏನಿದೆ?

11:22 AM Apr 14, 2024 | Team Udayavani |

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರವಿವಾರ 2024ರ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಇದಕ್ಕೆ ಮೋದಿ ಗ್ಯಾರಂಟಿ 2024 ಎಂದು ಹೆಸರಿಡಲಾಗಿದೆ. ಅಲ್ಲದೆ ಇದಕ್ಕೆ ಸಂಕಲ್ಪ ಪತ್ರ ಎಂದೂ ಕರೆಯಲಾಗಿದ್ದು, ಮಹಿಳಾ ಸಬಲೀಕರಣ, ಯುವಕರ ಮತ್ತು ಬಡವರ ಉನ್ನತಿಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

Advertisement

ಪ್ರಣಾಳಿಕೆಯು ಬಡವರು, ಯುವಕರು, ರೈತರು ಮತ್ತು ಮಹಿಳೆಯರ ಯೋಜನೆಗಳನ್ನು ಗುರಿಯಾಗಿಸಿದೆ. ಇದು ಭಾರತವನ್ನು ಸಮೃದ್ಧಗೊಳಿಸುವುದು, ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವುದು ಮತ್ತು ದೇಶದ ಪರಂಪರೆಯ ಅಭಿವೃದ್ಧಿಯನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿಯ ಸಂಕಲ್ಪ ಪತ್ರವು ಸುಧಾರಿತ ಭಾರತದ ನಾಲ್ಕು ಬಲಿಷ್ಠ ಕಂಬಗಳಾದ ಯುವ, ಮಹಿಳೆ, ಬಡವರು ಮತ್ತು ರೈತರ ಶ್ರೇಯೋಭಿವೃದ್ದಿಯನ್ನು ಒಳಗೊಂಡಿದೆ ಎಂದಿದ್ದಾರೆ.

ಪ್ರಣಾಳಿಕೆಯ ಪ್ರಮುಖ ಅಂಶಗಳು

1 ಹಿರಿಯ ನಾಗರಿಕರು (70 ವರ್ಷಕ್ಕಿಂತ ಹೆಚ್ಚಿನ) ಮತ್ತು ತೃತೀಯ ಲಿಂಗಿ ಸಮಾಜವನ್ನು ಆಯುಷ್ಮಾನ್ ಭಾರತ ಯೋಜನೆಯಡಿಗೆ ತರಲಾಗುವುದು. ಹಿರಿಯ ನಾಗರಿಕರಿಗೆ 5 ಲಕ್ಷ ರೂ ವೆಚ್ಚದ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

2 ಉಚಿತ ಪಡಿತರ ಯೋಜನೆಯನ್ನು ಮುಂದಿನ ಐದು ವರ್ಷಗಳ ಕಾಲ ಮುಂದುವರಿಸಲಾಗುವುದು ಮತ್ತು ಆಯುಷ್ಮಾನ್ ಭಾರತ್ ಯೋಜನೆಯಡಿ ಕಡಿಮೆ ಬೆಲೆಯ ಔಷಧಿಗಳು ಲಭ್ಯವಿರಲಿದೆ.

3 ಬಿಜೆಪಿ ಪ್ರಣಾಳಿಕೆಯು 3 ಕೋಟಿ ಮನೆಗಳನ್ನು ನಿರ್ಮಿಸುವುದು, ಎಲ್ಲಾ ಮನೆಗಳಿಗೆ ಅಗ್ಗದ ಪೈಪ್‌ಲೈನ್ ಗ್ಯಾಸ್ ಲಭ್ಯತೆಗಾಗಿ ಕೆಲಸ ಮಾಡುವುದು ಮತ್ತು ವಿದ್ಯುತ್ ಬಿಲ್‌ಗಳನ್ನು ಶೂನ್ಯಕ್ಕೆ ಕಡಿತಗೊಳಿಸುವುದಾಗಿ ಹೇಳಿದೆ.

4 ಏಕರೂಪ ನಾಗರಿಕ ಸಂಹಿತೆ ಮತ್ತು ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಜಾರಿಗೊಳಿಸಲಾಗುವುದು ಎಂದು ಬಿಜೆಪಿ ಪ್ರಣಾಳಿಕೆ ಹೇಳಿದೆ.

5 ಮೂರು ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ದೀದಿಗಳನ್ನಾಗಿ ಮಾಡುವುದಾಗಿ ಪ್ರಣಾಳಿಕೆ ಭರವಸೆ ನೀಡಿದೆ.

6 ಪಿಎಂ ಹೌಸಿಂಗ್ ಸ್ಕೀಮ್ ನಲ್ಲಿ ವಿಶೇಷ ಚೇತನ ಜನರಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ ಅವರ ಅನುಕೂಲಕ್ಕೆ ತಕ್ಕ ಹಾಗೆ ಮನೆಗಳನ್ನು ನಿರ್ಮಾಣ ಮಾಡಲು ಒತ್ತು ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next