ಲೋಕಸಭೆ ಚುನಾವಣೆಗೆ ಮತ್ತೆ ವಾರಾಣಸಿಯಿಂದಲೇ ಸ್ಪರ್ಧಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥನ ಕ್ಷೇತ್ರದಲ್ಲಿ ಗುರುವಾರ ಸಂಜೆ ಭರ್ಜರಿ ರೋಡ್ ಶೋ ನಡೆಸಿ ದರು. ಶುಕ್ರವಾರ ಇಲ್ಲಿ ನಾಮಪತ್ರ ಸಲ್ಲಿಸ ಲಿದ್ದಾರೆ. 7 ಕಿ.ಮೀ. ರೋಡ್ ಶೋ ನಡೆಸಿದ ಮೋದಿ ಅವರಿಗೆ ಅಭೂತಪೂರ್ವ ಸ್ಪಂದನೆಯೂ ವ್ಯಕ್ತವಾಯಿತು. ಬನಾರಸ್ ಹಿಂದೂ ವಿವಿ ಬಳಿ ಇರುವ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಗೌರವಾರ್ಪಣೆ ಮೂಲಕ ಮೋದಿ ರೋಡ್ ಶೋ ಆರಂಭಿಸಿದರು. ಇದು ಕೊನೆಗೊಂಡದ್ದು ದಶಾಶ್ವಮೇಧ ಘಾಟ್‌ನಲ್ಲಿ .
Advertisement
ಇಂದು ನಾಮಪತ್ರ ಸಲ್ಲಿಕೆಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ವಾರಾ ಣಸಿಯ ಬೂತ್ ಮಟ್ಟದ ಕಾರ್ಯ ಕರ್ತ ರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ ಮೋದಿ, ಅನಂತರ ಕಾಲ ಭೈರವೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸ ಲಿದ್ದಾರೆ. ಸುಮಾರು 11.30ರ ವೇಳೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮ ಪತ್ರ ಸಲ್ಲಿಸುವ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರದ ಸಚಿವರು, ಎನ್‌ಡಿಎ ನಾಯಕರು ಮೋದಿ ಅವರಿಗೆ ಸಾಥ್ ನೀಡಲಿದ್ದಾರೆ.
ಕೇಸರಿ ಕುರ್ತಾ, ಕೇಸರಿ ಸ್ಕಾಫ್ ದಿರಿಸಿನಲ್ಲಿ ಕಂಗೊಳಿಸುತ್ತಿದ್ದ ಮೋದಿ ಇದ್ದ ವಾಹನ ಸಾಗು ತ್ತಿದ್ದ ದಾರಿಗಳ ಎರಡೂ ಬದಿಗಳಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಎಲ್ಲರತ್ತ ಮೋದಿಯವರು ಕೈ ಬೀಸುತ್ತಾ ಸಾಗುತ್ತಿದ್ದರೆ, ಎಲ್ಲೆಲ್ಲೂ ಮೋದಿ ಯವರ ಜಯಘೋಷ ಮೊಳಗುತ್ತಿತ್ತು. ಅಭಿಮಾನಿಗಳು ಗುಲಾಬಿ ದಳಗಳ ಮಳೆಯನ್ನು ಮೋದಿಯವರ ಮೇಲೆ ಸುರಿಸುತ್ತಿದ್ದುದು ಸಾಮಾನ್ಯ ವಾಗಿತ್ತು. ದಶಾಶ್ವಮೇಧ ಘಾಟ್‌ನಲ್ಲಿ ರ್ಯಾಲಿ ಮುಕ್ತಾಯಗೊಂಡಿತು. ರಾತ್ರಿ ಗಂಗಾ ನದಿ ದಡದಲ್ಲಿ ಗಂಗಾರತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.