Advertisement

Mann Ki Baat ನಲ್ಲಿ ಚಾಮರಾಜನಗರದ ಕರಕುಶಲ ಉದ್ಯಮಿ ವರ್ಷಾ ಹೆಸರು ಪ್ರಸ್ತಾಪಿಸಿದ ಪ್ರಧಾನಿ

02:53 PM Nov 26, 2023 | Team Udayavani |

ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದಿನ ಮನ್ ಕೀ ಬಾತ್ ನಲ್ಲಿ ತಾಲೂಕಿನ ಉಮ್ಮತ್ತೂರು ಗ್ರಾಮದ ಮಹಿಳಾ ಕರಕುಶಲ ಉದ್ಯಮಿ ವರ್ಷಾ ಅವರ ಹೆಸರು ಪ್ರಸ್ತಾಪಿಸಿದರು.

Advertisement

ಬಾಳೆ ದಿಂಡಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ವರ್ಷಾ ಅವರು ಮನ್ ಕಿ ಬಾತ್ ನಿಂದ ಪ್ರೇರಿತರಾಗಿ ಕರಕುಶಲ ಉದ್ಯಮಿಯಾಗಿದ್ದಾರೆ  ಎಂದು ಶ್ಲಾಘಿಸಿದರು.

ಮೈಸೂರಿನವರಾದ ವರ್ಷಾ  ಅವರ ಪತಿ ಐಟಿ ಉದ್ಯೋಗಿಯಾಗಿದ್ದು ಉಮ್ಮತ್ತೂರಿನಲ್ಲಿ ಜಮೀನು ಹೊಂದಿದ್ದಾರೆ. ವರ್ಷಾ ಅವರು ಇಲ್ಲಿ ಬಾಳೆ ನಾರು ಮತ್ತಿತರ ಪದಾರ್ಥಗಳಿಂದ ಕರಕುಶಲ ವಸ್ತು ತಯಾರಿಸುತ್ತಾರೆ.

ಈ ಬಗ್ಗೆ  ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಹರ್ಷ ವ್ಯಕ್ತಪಡಿಸಿದ ವರ್ಷಾ,

“ಎರಡು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಕೇಳಿದ್ದೆ. ಆ ಸಂದರ್ಭದಲ್ಲಿ ತಮಿಳುನಾಡಿನ ಉದ್ಯಮಿಯೊಬ್ಬರ ಹೆಸರನ್ನು ಮೋದಿಯವರು ಪ್ರಸ್ತಾಪಿಸಿದ್ದರು. ಅದನ್ನು ಕೇಳಿ ನಾವೇಕೆ ಈ ಉದ್ಯಮ ಪ್ರಾರಂಭ ಮಾಡಬಾರದು ಅಂದುಕೊಂಡೆ. ಅವರ ಮಾತಿನಿಂದ‌ ಪ್ರೇರಣೆ ಪಡೆದು ಹೊಸ ಉದ್ಯಮ ಪ್ರಾರಂಭಿಸಿದ್ದೇವೆ. ಆಕೃತಿ ಎಕೋ ಫ್ರೆಂಡ್ಲಿ ಎಂಟರ್ ಪ್ರೈಸಸ್ ಮೂಲಕ ಉದ್ಯಮಕ್ಕೆ ಕಾಲಿಟ್ಟಿದ್ದೇವೆ. ನಮ್ಮಲ್ಲಿ ಸ್ಥಳೀಯ ವಸ್ತುಗಳನ್ನೇ ಬಳಸಿ ಕರಕುಶಲ ಉತ್ಪನ್ನಗಳನ್ನ ತಯಾರಿಸುತ್ತೇವೆ. ಬಾಳೆ ಹಣ್ಣಿನ ಸಿಪ್ಪೆಯಿಂದ ಜೈವಿಕ ಗೊಬ್ಬರ ತಯಾರಿಕೆ ಮಾಡುವುದು. ಕರಕುಶಲ ವಸ್ತುಗಳನ್ನ ತಯಾರಿಸುತ್ತಿದ್ದೇವೆ. ಪ್ರಧಾನಿ ಮೋದಿಯವರು ನನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದು ತುಂಬಾ ಖುಷಿಯಾಗಿದೆ. ನನ್ನ ಸಾಧನೆಗೆ ನಮ್ಮ ಕುಟುಂಬಸ್ಥರು ಸಹ ಸಹಕಾರ ನೀಡಿದ್ದಾರೆ. 2-3 ಲಕ್ಷ ಬಂಡವಾಳ ಹಾಕಿ ಉದ್ಯಮ ಪ್ರಾರಂಭ ಮಾಡಿದೆವು. ಇಂದು ನಮ್ಮ ಉದ್ದಿಮೆಯಲ್ಲಿ 8 ಜನರು ಕೆಲಸ ಮಾಡುತ್ತಾರೆ. ಮಹಿಳೆಯರು ಸಹ ಉದ್ಯಮದಲ್ಲಿ ಶ್ರದ್ದೆಯಿಂದ ಕೆಲಸ ಮಾಡಿದರೆ ಯಶಸ್ವಿಯಾಗುತ್ತಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next