ನವದೆಹಲಿ: ಅಹಮದಾಬಾದ್ ಮತ್ತು ಸಾವೋ ಪಾವ್ಲೋ(ಬ್ರೆಜಿಲ್) ನಡುವಿನ ದೂರ 13,848 ಕಿಲೋ ಮೀಟರ್. ಆದರೆ ಇಬ್ಬರ ನಿಧನದ ವಿಚಾರದಲ್ಲಿ ಈ ಅಂತರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿಲ್ಲ. ಯಾಕೆಂದರೆ ಬ್ರೆಜಿಲ್ ನ ದಂತಕಥೆ ಫುಟ್ಬಾಲ್ ತಾರೆ ಪೀಲೆ ನಿಧನರಾದ ಕೆಲವೇ ಗಂಟೆಗಳ ಅಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ವಿಧಿವಶರಾಗಿರುವುದು.
ಇದನ್ನೂ ಓದಿ:ಆಘಾತದ ನಡುವೆಯೂ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ
ಪೀಲೆ ಮತ್ತು ಹೀರಾಬೆನ್ ವ್ಯಕ್ತಿಗಳು ಬೇರೆಯಾಗಿರಬಹುದು. ಆದರೆ ಇಬ್ಬರ ನಿಧನ ಒಂದೇ ದಿನ ನಡೆದಿದ್ದು, ಪೀಲೆ ಮತ್ತು ಹೀರಾಬೆನ್ ನಿಧನಕ್ಕೆ ಭಾರತ ಸಂತಾಪ ಸೂಚಿಸಿದೆ.
ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಪೀಲೆ ಅವರ ಶತಾಯುಷಿ ತಾಯಿ ಸೆಲೆಸ್ಟ್ ಅರಾಂಟೆಸ್ ಅವರು ತಮ್ಮ 82 ವರ್ಷದ ಮಗನನ್ನು ಕಳೆದುಕೊಂಡಿದ್ದು, ಪ್ರಧಾನಿ ಮೋದಿ ಅವರು ತಮ್ಮ ಶತಾಯುಷಿ ತಾಯಿಯನ್ನು ಕಳೆದುಕೊಂಡಿದ್ದಾರೆ.
ಗುರುವಾರ ತಡರಾತ್ರಿ ಪೀಲೆ ನಿಧನರಾಗಿದ್ದರು. ಶುಕ್ರವಾರ ನಸುಕಿನ ವೇಳೆ 3.39ಕ್ಕೆ ವಿಧಿವಶರಾಗಿದ್ದರು. ಪೀಲೆ ಸಾವೋ ಪಾವ್ಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಹೀರಾಬೆನ್ ಅಹಮದಾಬಾದ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು.