ಹೊಸದಿಲ್ಲಿ: ಎಲ್ಲ ಸವಾಲುಗಳ ನಡುವೆಯೂ ಮುನ್ನಡೆಯುತ್ತಿರುವ ಭಾರತ, ತೀವ್ರ ಅಭಿವೃದ್ಧಿ ಸಾಧಿಸುತ್ತಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಸಹಿತ 2023ರ ಮೊದಲ 75 ದಿನಗಳಲ್ಲೇ 75 ಮಹತ್ತರ ಸಾಧನೆಗಳನ್ನು ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ತಮ್ಮ ಭಾಷಣದಲ್ಲಿ ಕರ್ನಾಟಕದ ಹಲವು ಸಾಧನೆಗಳನ್ನು ಪ್ರಸ್ತಾವಿಸಿದರು. ಇಂಡಿಯಾ ಟುಡೇ 2023ರ ಸಮ್ಮೇಳನದಲ್ಲಿ ಭಾಗವಹಿಸಿದ ಪ್ರಧಾನಿ “ದಿ ಇಂಡಿಯಾ ಮೂವ್ಮೆಂಟ್’ ಎನ್ನುವ ವಿಶಿಷ್ಟ ಥೀಮ್ ಅನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಅಭಿವೃದ್ಧಿಯನ್ನು ಇಂದು ವಿಶ್ವವೇ “ದಿ ಇಂಡಿಯಾ ಮೂವಮೆಂಟ್’ ಎಂದು ಶ್ಲಾ ಸುತ್ತಿದೆ. ಹಲವು ಸವಾಲುಗಳನ್ನು ಮೆಟ್ಟಿ ಭಾರತ ಮುನ್ನಡೆಯುತ್ತಿದೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಇತ್ತೀಚೆಗಷ್ಟೇ ಪ್ರಧಾನಿ ಲೋಕಾರ್ಪಣೆಗೊಳಿಸಿದ ನೂತನ ವಿಮಾನ ನಿಲ್ದಾಣ ಹಾಗೂ ಬೆಂಗಳೂರು-ಮೈಸೂರು ದಶಪಥ ರಸ್ತೆಯ ಬಗ್ಗೆಯೂ ಉಲ್ಲೇಖೀಸಿದರು. ಅಲ್ಲದೇ ಐಐಟಿ ಧಾರವಾಡದ ಶಾಶ್ವತ ಕ್ಯಾಂಪಸ್ ಉದ್ಘಾಟನೆಯ ವಿಚಾರವನ್ನೂ ಹಂಚಿಕೊಂಡಿರುವ ಮೋದಿ, ಭಾರತ ಸದ್ದಿಲ್ಲದೆ ಹಲವು ಸಾಧನೆಗಳನ್ನು ಮಾಡುತ್ತಿದೆ ಎಂದು ಶ್ಲಾಘಿಸಿದ್ದಾರೆ.