ಕೊಲ್ಕತ್ತಾ : ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್ ನಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿದಿರುವ ಮೋದಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿಯನ್ನು ವ್ಯಂಗ್ಯ ಮಾಡಿದ್ದಾರೆ.
ದೀದಿ(ಮಮತಾ ಬ್ಯಾನರ್ಜಿ) ಸ್ಕೂಟಿಯು ನಂದಿಗ್ರಾಮದ ಕಡೆ ತಿರುಗಿದೆ. ನಾನು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಯಾರಿಗೂ ಕೆಟ್ಟದ್ದನ್ನು ಎಂದೂ ಬಯಸುವವನಲ್ಲ. ಆದ್ರೆ ದೀದಿಯ ಸ್ಕೂಟಿ ನಂದಿಗ್ರಾಮದಲ್ಲಿ ಬಿದ್ದರೆ ನಾನೇನು ಮಾಡಿಲಿ ಎಂದಿದ್ದಾರೆ.
ಇತ್ತೀಚೆಗೆ ಮಮತಾ ಬ್ಯಾನರ್ಜಿ ಭವಾನಿಪೋರ್ ಕ್ಷೇತ್ರವನ್ನು ಬಿಟ್ಟು ನಂದಿಗ್ರಾಮದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ದೀದಿಯ ಕಾಲೆಳೆದಿದ್ದಾರೆ.
ಭಾಷಣದಲ್ಲಿ ಹೇಳಿರುವ ಮೋದಿ, ನನ್ನನ್ನು ಏನೇನೋ ಕರೆಯುತ್ತಾರೆ. ಕೆಲವರು ರಾವಣ, ಕೆಲವೊಮ್ಮೆ ಸೈತಾನ, ಗೂಂಡಾ ಎಂದೆಲ್ಲಾ ಕರೆದಿದ್ದಾರೆ. ದೀದಿ ಯಾಕೆ ಅಷ್ಟು ಸಿಟ್ಟಾಗಿದ್ದೀರಿ ಎಂದು ಮಮತಾ ಬ್ಯಾನರ್ಜಿಯನ್ನು ಮೋದಿ ಕೆಣಕಿದರು.