ಹೊಸದಿಲ್ಲಿ: 2019ರ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಕೋರ್ಟ್‌ನಿಂದ ಶಿಕ್ಷೆಗೊಳಗಾಗಿ ಲೋಕಸಭೆಯಿಂದ ಅನರ್ಹಗೊಂಡ ಒಂದು ದಿನದ ನಂತರ ರಾಹುಲ್ ಗಾಂಧಿ ಶನಿವಾರ (ಮಾರ್ಚ್ 25) ಸುದ್ದಿಗೋಷ್ಠಿ ನಡೆಸಿದರು.
ತಮ್ಮ ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗಾಂಧಿ, “ನಾನು ಸಂಸತ್ತಿನ ಹೊರಗೆ ಇದ್ದರೂ ಪರವಾಗಿಲ್ಲ, ನಾನು ದೇಶಕ್ಕಾಗಿ ಹೋರಾಡುತ್ತಲೇ ಇರುತ್ತೇನೆ” ಎಂದು ಹೇಳಿದರು. ಅದಾನಿ ಕುರಿತ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ಮೋದಿ ಹೆದರುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ ನಾನು ನನ್ನ ಕೆಲಸವನ್ನು ಮಾಡುತ್ತೇನೆ, ನಾನು ಸಂಸತ್ತಿನ ಒಳಗಿದ್ದರೂ, ಹೊರಗಿದ್ದರೂ ಪರವಾಗಿಲ್ಲ, ನಾನು ದೇಶಕ್ಕಾಗಿ ಹೋರಾಡುತ್ತೇನೆ,. ಸತ್ಯವನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ನನಗೆ ಆಸಕ್ತಿ ಇಲ್ಲ. ನಾನು ಸತ್ಯವನ್ನು ಮಾತ್ರ ಮಾತನಾಡುತ್ತೇನೆ, ಇದು ನನ್ನ ಕೆಲಸ ಮತ್ತು ನನ್ನನ್ನು ಅನರ್ಹಗೊಳಿಸಿದರೂ ಅಥವಾ ಬಂಧಿಸಿದರೂ ನಾನು ಅದನ್ನು ಮಾಡುತ್ತೇನೆ. ಈ ದೇಶವು ನನಗೆ ಎಲ್ಲವನ್ನೂ ನೀಡಿದೆ ಮತ್ತು ಅದಕ್ಕಾಗಿಯೇ ನಾನು ಇದನ್ನು ಮಾಡುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ:ಅಮೃತಸಿಟಿ ಯೋಜನೆಯ ಪಾರ್ಕಿಂಗ್ ಜಾಗಕ್ಕೆ ಅಡ್ಡಿಯಾಗಿದ್ದ ನಾಲ್ಕು ಮಳಿಗೆಗಳ ನೆಲಸಮ
ಪ್ರಧಾನಿ ಕುರಿತು ಮಾತನಾಡಿದ ಅವರು, ”ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಹೆದರಿದ್ದಾರೆ, ಅವರ ಕಣ್ಣಲ್ಲಿ ಅದನ್ನು ನೋಡಿದ್ದೇನೆ. ಆದ್ದರಿಂದಲೇ ನಂತರ ಅನರ್ಹ ಮಾಡಿದ್ಆರೆ. ಇದು ಇಡೀ ನಾಟಕ. ಈ ಬೆದರಿಕೆಗಳು, ಅನರ್ಹತೆಗಳು ಅಥವಾ ಜೈಲು ಶಿಕ್ಷೆಗಳಿಗೆ ನಾನು ಹೆದರುವುದಿಲ್ಲ” ಎಂದು ಹೇಳಿದರು.