Advertisement

ಪ್ರಧಾನಿ ಮೋದಿ ಈಗ ಚಲಾವಣೆಯಿಲ್ಲದ ನಾಣ್ಯ: ಕಾಂಗ್ರೆಸ್‌

08:18 PM Nov 12, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಈಗ ಚಲಾವಣೆ ಇಲ್ಲದ ನಾಣ್ಯ ಎಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಗೇಲಿ ಮಾಡಿದೆ. ಜನ ಮಳೆ ಬಂದರೆ ನಿಲ್ಲಬಲ್ಲರು, ಪ್ರಧಾನಿಯ ಸುಳ್ಳಿನ ಸುರಿಮಳೆಗೆ “ನಿಲ್ಲರು ಎಂದು ಲೇವಡಿ ಮಾಡಿದೆ.

Advertisement

ಈ ಬಗ್ಗೆ ಸರಣಿ ಟ್ವಿಟ್‌ ಮಾಡಿರುವ ಕಾಂಗ್ರೆಸ್‌, ಮೋದಿ ಈಗ ಚಲಾವಣೆ ಇಲ್ಲದ ನಾಣ್ಯ’ ಹಾಗಾಗಿ ಖಾಲಿ ಕುರ್ಚಿಗಳಿಗೆ ಭಯ ಬಿದ್ದ ಬಿಜೆಪಿ ಹಣದ ಆಮಿಷ ಒಡ್ಡಿ ಜನರನ್ನು ಕರೆತಂದಿದೆ. ವಂಚಕ ಬಿಜೆಪಿ ಕಾರ್ಮಿಕರಿಗೆ ಹಣ ನೀಡುವುದರಲ್ಲೂ ವಂಚಿಸಿದೆ ಎಂದು ಕುಟುಕಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರದ ಕಮಿಷನ್‌ 100 ಪರ್ಸೆಂಟ್‌ಗೆ ಏರಿಕೆಯಾಗಿದೆಯೇ ಎಂದು ಪ್ರಶ್ನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ 500 ರೂ. ನೀಡುವ ಭರವಸೆ ಕೊಟ್ಟು ಕರೆತಂದವರಿಗೆ 200 ರೂ. ಕೊಟ್ಟು ವಂಚಿಸಿದ್ದ ಬಿಜೆಪಿ ಈಗ ಮತ್ತೂಮ್ಮೆ ಒಂದು ರೂಪಾಯಿಯನ್ನೂ ಕೊಡದೆ ವಂಚಿಸಿದೆ ಎಂದು ವ್ಯಂಗ್ಯ ಮಾಡಿದೆ.

ಹಣ ಸಿಗದೆ ಕಾರ್ಮಿಕರು ಬಿಜೆಪಿ ವಿರುದ್ಧ ಪೊಲೀಸ್‌ ದೂರು ನೀಡುವಂತಾಗಿದ್ದು ಬಿಜೆಪಿ ವಂಚನೆಗೆ ಹಿಡಿದ ಕನ್ನಡಿ. ಕಮಿಷನ್‌ ಲೂಟಿ ಈಗ 100 ಪರ್ಸೆಂಟ್‌ಗೆೆ ಏರಿಕೆಯಾಗಿದೆಯೇ ಬಿಜೆಪಿ ಫಾರ್‌ ಕರ್ನಾಟಕ ಎಂದು ವಾಗ್ಧಾಳಿ ನಡೆಸಿದೆ.

ಕರ್ನಾಟಕ್ಕೆ ಭಾಷಣ ಮಾಡಲಷ್ಟೇ ಬರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರಿಗೆ ಹೇವರಿಕೆ ಹುಟ್ಟಿದೆ. ಭ್ರಷ್ಟ ಟ್ರಬಲ್‌ ಎಂಜಿನ್‌ ಸರ್ಕಾರದ ಮೇಲೆ ಜಿಗುಪ್ಸೆ ಹುಟ್ಟಿದೆ. ಸುಳ್ಳುಗಳನ್ನೇ ಜೀವಳವಾಗಿಸಿಕೊಂಡ ಬಿಜೆಪಿ ಫಾರ್‌ ಕರ್ನಾಟಕಕ್ಕೆ ಕೋಪ ಹುಟ್ಟಿದೆ.ಅದಕ್ಕೆ ಸಾಕ್ಷಿ ಇಲ್ಲಿದೆ ಎಂದು ಟೀಕಾಪ್ರಹಾರ ನಡೆಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next