Advertisement

ಕೋವಿಡ್ ಲಸಿಕೆ ಯಾವಾಗ ಸಿಗಲಿದೆ ಎಂದು ಹೇಳಲು ಸಾಧ್ಯವಿಲ್ಲ: ಸಿಎಂ ಗಳ ಜೊತೆ ಚರ್ಚೆಯಲ್ಲಿ ಮೋದಿ

03:46 PM Nov 24, 2020 | keerthan |

ಹೊಸದಿಲ್ಲಿ: ಭಾರತಕ್ಕೆ ಕೋವಿಡ್ ಲಸಿಕೆ ಯಾವಾಗ ಬರಲಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಇದು ನಮ್ಮ ಕೈಯಲ್ಲಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಕೋವಿಡ್ ಪರಿಸ್ಥಿತಿ ಕುರಿತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು.

ಕೋವಿಡ್ ಲಸಿಕೆ ಯಾವಾಗ ಲಭ್ಯವಾಗಲಿದೆ ಎನ್ನವುದು ಹೇಳುವುದು ಕಷ್ಟ. ಅದು ನಿಮ್ಮ ಅಥವಾ ನಿಮ್ಮ ಕೈಯಲ್ಲಿಲ್ಲ. ಅದು ವಿಜ್ಞಾನಿಗಳ ಕೈಯಲ್ಲಿದೆ. ಕೆಲವರು ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಕೇಂದ್ರ ಮತ್ತು ರಾಜ್ಯಗಳ ಜಂಟಿ ಪ್ರಯತ್ನದಿಂದ ಭಾರತ ಇಂದು ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಭಾರತ ಧೈರ್ಯದಿಂದ ಈ ಸೋಂಕಿನ ವಿರುದ್ಧ ಹೋರಾಟ ನಡೆಸಿದೆ. ರಾಜ್ಯಗಳು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಕೋವಿಡ್ ಔಷಧ ಸಂಗ್ರಹಣಾ ಕೇಂದ್ರ ಆರಂಭಕ್ಕೆ ಸಿದ್ಧತೆ!

Advertisement

ಆಮ್ಲಜನಕ ಮತ್ತು ವೆಂಟಿಲೇಟರ್​ ಸಕಾಲಕ್ಕೆ ದೊರೆಯುವಲ್ಲಿ ಹೆಚ್ಚಿನ ಗಮನವಹಿಸಲಾಗಿದೆ. ಆಮ್ಲಜನಕ ವಿಚಾರದಲ್ಲಿ ಮೆಡಿಕಲ್​ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳು ಸ್ವಾವಲಂಬಿಯನ್ನಾಗಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದಲ್ಲಿ ಸುಮಾರು 160 ಆಕ್ಸಿಜನ್​ ಜನರೇಷನ್​ ಪ್ಲ್ಯಾಂಟ್ಸ್​ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಲಸಿಕೆ ಪ್ರಮಾಣದ ಬಗ್ಗೆ ಇನ್ನೂ ಖಚಿತವಾಗಿಲ್ಲ. ಅದರ ಬೆಲೆಯ ಬಗ್ಗೆಯೂ ನಿರ್ಧಾರವಾಗಿಲ್ಲ. ಆದರೆ ಪ್ರತಿಯೊಬ್ಬ ನಾಗರಿಕನಿಗೆ ಕೋವಿಡ್ ಲಸಿಕೆ ತಲುಪಿಸುವುದು ರಾಷ್ಟ್ರೀಯ ಬದ್ಧತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next