Advertisement
ಉತ್ತರ ಪ್ರದೇಶದಲ್ಲಿ ಮಂಗಳವಾರ 341 ಕಿಮೀ ದೂರದ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಉದ್ಘಾಟಿಸಿದ ಬಳಿಕ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡಿದ್ದಾರೆ. ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿ ರಾಜ್ಯದ ಗರಿಮೆ, ಹೆಮ್ಮೆಯ ಸಂಕೇತ ಎಂದು ಕೊಂಡಾಡಿದ್ದಾರೆ.
Related Articles
ಈ ಷಟ್ಪಥ ಹೆದ್ದಾರಿ ಪೂರ್ವಾಂಚಲ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಲಿದೆ. ಉತ್ತರ ಪ್ರದೇಶ ಏನನ್ನೂ ಸಾಧಿಸಲಾಗದು ಎಂದು ಪ್ರತಿಪಾದಿಸುತ್ತಿದ್ದವರು ಸುಲ್ತಾನ್‌ಪುರಕ್ಕೆ ಬಂದು ನೋಡಬೇಕು. 3 ವರ್ಷಗಳ ಹಿಂದೆ ಇಲ್ಲಿ ಜಮೀನು ಮಾತ್ರ ಇತ್ತು. ಈಗ ಇಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿದೆ. ಜತೆ ಗೆ 3.2 ಕಿಮೀನ ವಿಮಾನ ಇಳಿದಾಣ ಕೂಡ ನಿರ್ಮಾಣವಾಗಿದೆ. ಈ ಹೆದ್ದಾರಿ ರಾಜ್ಯದ ಅಭಿವೃದ್ಧಿ ಮತ್ತು ಗರಿಮೆಯ ಸಂಕೇತ ಎಂದಿದ್ದಾರೆ ಮೋದಿ.
Advertisement
ಮಾಜಿ ಸಿಎಂ ಅಖೀಲೇಶ್ ಯಾದವ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, “2014ರಲ್ಲಿ ವಾರಾಣಸಿಯ ಸಂಸದನಾದ ಬಳಿಕ ರಾಜ್ಯದ ಅಭಿವೃದ್ಧಿಯ ಬಗ್ಗೆ ಸಮಾಜವಾದಿ ಪಕ್ಷದ ಸರ್ಕಾರ ಸಹಕರಿಸಲಿಲ್ಲ. ನನ್ನ ಬಳಿ ನಿಂತರೆ ಅವರ ವೋಟ್ ಬ್ಯಾಂಕ್‌ಗೆ ಸಂಚಕಾರ ಬಂದೀತು ಎಂಬ ಭಾವನೆ ಆ ಪಕ್ಷದ ನಾಯಕರಲ್ಲಿತ್ತು. ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ ಪ್ರಕ್ರಿಯೆ ಮುಕ್ತಾಯದ ಬಳಿಕ ಕೂಡಲೇ ತೆರಳುತ್ತಿದ್ದರು’ ಎಂದು ಲೇವಡಿ ಮಾಡಿದ್ದಾರೆ.
ಐಎಎಫ್ ನ ಹರ್ಕ್ಯುಲಸ್ ವಿಮಾನ ಏರಿದ ಪ್ರಧಾನಿ ಇದಕ್ಕೂ ಮುನ್ನ ಪ್ರಧಾನಿ ಮೋದಿಯವರು ವಾಯುಪಡೆಯ ಸಿ-130ಜೆ ಹರ್ಕ್ಯುಲಸ್ ವಿಮಾನ ಏರಿ, ಎಕ್ಸ್‌ಪ್ರಸ್ ವೇನ ಏರ್‌ಸ್ಟ್ರಿಪ್ ನಲ್ಲಿ ಲ್ಯಾಂಡ್ ಆದರು. ಜತೆಗೆ ಮಿರಾಜ್ 2 ಸಾವಿರ ಯುದ್ಧ ವಿಮಾನ ಲ್ಯಾಂಡ್ ಆಗುವುದನ್ನೂ ಪ್ರಧಾನಿ ಖುದ್ದು ವೀಕ್ಷಿಸಿದ್ದಾರೆ. ನಂತರ ನಡೆದ ಏರ್‌ಶೋನಲ್ಲಿ ಮೂರು ಕಿರಣ್ ಎಂಕೆ2, 2 ಸುಖೋಯ್ 30 ವಿಮಾನಗಳೂ ಪಾಲ್ಗೊಂಡವು. ಕಾರ್ಯಕ್ರಮದಲ್ಲಿ ಉ.ಪ್ರ.ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರಿದ್ದರು.