Advertisement

ಐತಿಹಾಸಿಕ ಖೇಲೋ ಇಂಡಿಯಾ ವಿವಿ ಕ್ರೀಡಾಕೂಟಕ್ಕೆ ಮೋದಿ ಚಾಲನೆ

10:16 AM Feb 23, 2020 | Sriram |

ಭುವನೇಶ್ವರ: ಭಾರತದ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಿದರು.

Advertisement

ಈ ರೀತಿಯ ಕ್ರೀಡಾಕೂಟ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲ ಸಲವಾಗಿದ್ದು, ದೇಶದ ಒಟ್ಟು 159 ವಿವಿಗಳ 3,400 ಆ್ಯತ್ಲೀಟ್‌ಗಳು ಭಾಗವಹಿಸಿದ್ದಾರೆ. 17 ಮುಖ್ಯ ವಿಭಾಗಗಳು, ಹಲವು ಉಪವಿಭಾಗಗಳಲ್ಲಿ ಆಟಗಾರರು ಸ್ಪರ್ಧಿಸಲಿದ್ದಾರೆ. ಇದರಲ್ಲಿ ರಗಿº ಕೂಡ ಸೇರಿಕೊಂಡಿದೆ.

ಜವಾಹರ್‌ಲಾಲ್‌ ನೆಹರೂ ಮೈದಾನದಲ್ಲಿ ವೀಡಿಯೊ ಕಾನ್ಫರೆನ್ಸ್‌ ಮೂಲಕ ಮೋದಿ ಕ್ರೀಡಾಕೂಟ ಉದ್ಘಾಟಿಸಿ, “ಇದು ಭಾರತದ ಪಾಲಿಗೆ ಐತಿಹಾಸಿಕ ಘಟನೆ. ಭಾರತದ ಕ್ರೀಡೆಯ ಭವಿಷ್ಯವನ್ನೇ ಇದು ಬದಲಿಸಲಿದೆ’ ಎಂದರು.

ಮೋದಿ ಜತೆಗೆ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ಕ್ರೀಡಾಮಂತ್ರಿ ಕಿರಣ್‌ ರಿಜಿಜು, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಇದ್ದರು. ಒಡಿಶಾದ ಖ್ಯಾತ ಓಟಗಾರ್ತಿ ದ್ಯುತಿ ಚಂದ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಂಗಳೂರು ವಿಶ್ವ ವಿದ್ಯಾಲಯದ ಟ್ರಿಪಲ್‌ ಜಂಪ್‌ ಸ್ಪರ್ಧಿ ಜೇ ಶಾ ಭಾಗವಹಿಸಿದ್ದರು. ಇದೇ ವೇಳೆ 45 ನಿಮಿಷಗಳ ವೈವಿಧ್ಯಮಯ, ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next