ಮೇರಠ : ಇಡೀ ವಿಶ್ವದಲ್ಲೇ ಶ್ರೇಷ್ಠ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಭಾರತದಲ್ಲಿ ನಿರ್ಮಿಸಬೇಕು..
ಇದು ಭಾರತ ಸರಕಾರದ ಯೋಜನೆಗಳಲ್ಲೊಂದು. ಹೀಗೊಂದು ಉದ್ದೇಶದಿಂದ ಉತ್ತರ ಪ್ರದೇಶದ ಮೇರಠ ನಲ್ಲಿ ಧ್ಯಾನ್‌ಚಂದ್ ಕ್ರೀಡಾ ವಿವಿ ಕಾಮಗಾರಿ ಆರಂಭಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ರವಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಎಲ್ಲಿದೆ, ಹೇಗಿದೆ ವಿವಿ?: ಮೇರಠ ನ ಸರ್ಧಾನ ನಗರದ ಸಲಾವ ಮತ್ತು ಕೈಲಿ ಹಳ್ಳಿಗಳಲ್ಲಿ ಈ ವಿವಿ ನಿರ್ಮಾಣವಾಗುತ್ತಿದೆ. ಅಂದಾಜು ವೆಚ್ಚ 700 ಕೋಟಿ ರೂ. ಇಡೀ ಜಗತ್ತಿನಲ್ಲಿ ಶ್ರೇಷ್ಠ ವಿವಿಯಾಗಬೇಕು ಎಂಬ ಉದ್ದೇಶದಿಂದ ಇದಕ್ಕೆ ಹಣವನ್ನು ವಿನಿಯೋಗಿಸಲಾಗುತ್ತಿದೆ. ಇದರಲ್ಲಿ 1,080 ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದು. 540 ಮಹಿಳೆಯರು, 540 ಪುರುಷ ಕ್ರೀಡಾಪಟುಗಳಿಗೆ ಇಲ್ಲಿ ಸ್ಥಾನ ಸಿಗಲಿದೆ. ಭಾರತೀಯ ಕ್ರೀಡಾಪಟುಗಳನ್ನು ವಿಶ್ವದರ್ಜೆ ಗೇರಿಸುವುದೇ ಇದರ ಉದ್ದೇಶವಾಗಿದೆ.
ಇದನ್ನೂ ಓದಿ:ಕಾರು ಮಾರಾಟದಲ್ಲಿ ಹುಂಡೈಯನ್ನು ಮೀರಿಸಿದ ಟಾಟಾ
ಅತ್ಯಾಧುನಿಕ ಸೌಲಭ್ಯಗಳು ಈ ವಿವಿ ಯಲ್ಲಿ ಸಿಗಲಿವೆ. ಕ್ರೀಡಾ ಮೂಲಸೌಕ ರ್ಯಗಳಾದ ಸಿಂಥೆಟಿಕ್ ಹಾಕಿ ಮೈದಾನ, ಫುಟ್‌ಬಾಲ್ ಮೈದಾನ, ಬಾಸ್ಕೆಟ್‌ಬಾಲ್, ವಾಲಿಬಾಲ್, ಹ್ಯಾಂಡ್‌ಬಾಲ್, ಕಬಡ್ಡಿ ಅಂಕಣಗಳು, ಲಾನ್ ಟೆನಿಸ್ ಅಂಕಣ, ಜಿಮ್ನಾಶಿಯಂ, ಸಿಂಥೆಟಿಕ್ ಓಟದ ಅಂಕಣ, ಈಜುಕೊಳ, ಸೈಕ್ಲಿಂಗ್ ವೆಲೋಡ್ರೋಮ್, ಬಹೂಪಯೋಗಿ ಭವನ ಇಲ್ಲಿರಲಿದೆ.
ಹಾಗೆಯೇ ಶೂಟಿಂಗ್, ಸ್ಕ್ವಾಷ್, ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಬಿಲ್ಗಾರಿಕೆ, ಕೆನೋಯಿಂಗ್, ಕಯಾಕಿಂಗ್ ಇತರ ಸೌಲಭ್ಯಗಳೂ ಇಲ್ಲಿರಲಿವೆ.