Advertisement

ಒಮಿಕ್ರಾನ್ ನಮ್ಮ ಮನೆಬಾಗಿಲು ತಟ್ಟಿದೆ ಎಂದು ನೆನಪಿನಲ್ಲಿರಲಿ: ಪ್ರಧಾನಿ ಮೋದಿ

12:44 PM Dec 26, 2021 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಡಿಸೆಂಬರ್ 26, 2021) ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, “ನಮ್ಮ ದೇಶದ ತನ್ನ ಲಸಿಕೆ ಡೇಟಾವನ್ನು ಪ್ರಪಂಚದಾದ್ಯಂತ ಇರುವವರೊಂದಿಗೆ ಹೋಲಿಸಿದರೆ ಅಭೂತಪೂರ್ವ ಸಾಧನೆ ಮಾಡಿದೆ” ಎಂದು ಪ್ರಧಾನಿ ಹೇಳಿದರು.

Advertisement

ಈ ‘ಮನ್ ಕಿ ಬಾತ್’ ಕಾರ್ಯಕ್ರಮದ 84ನೇ ಸಂಚಿಕೆ ಮತ್ತು ವರ್ಷದ ಕೊನೆಯ ಆವೃತ್ತಿಯಾಗಿತ್ತು. ಒಮಿಕ್ರಾನ್ ವಿರುದ್ಧ ಹೋರಾಡಲು ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತಿನ ಶಕ್ತಿಯನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.

“ಕೋವಿಡ್ 19 ಒಮಿಕ್ರಾನ್ ನ ಹೊಸ ರೂಪಾಂತರವು ನಮ್ಮ ಬಾಗಿಲುಗಳನ್ನು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನವು ಮುಖ್ಯವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ:ಸಂಕ್ರಾತಿ ಬಳಿಕ ಸಂಪುಟ ಸಂಕ್ರಮಣ: ವಿಸ್ತರಣೆಯೋ, ಪುನರಚನೆಯೋ ?

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಭಾರತವು ಕುಟುಂಬವಾಗಿ ಒಟ್ಟಿಗೆ ನಿಂತಿರುವುದಕ್ಕೆ ಪ್ರಧಾನಮಂತ್ರಿಯವರು ಶ್ಲಾಘಿಸಿದರು. “ಸಾಂಕ್ರಾಮಿಕತೆಯ ನಡುವೆ ಭಾರತವು ಕುಟುಂಬವಾಗಿ ಒಟ್ಟಿಗೆ ನಿಂತಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

Advertisement

ದೇಶದ ವಿಜ್ಞಾನಿಗಳು ಹೊಸ ಒಮಿಕ್ರಾನ್ ರೂಪಾಂತರವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. “ಪ್ರತಿದಿನ ಅವರು ಹೊಸ ಡೇಟಾವನ್ನು ಪಡೆಯುತ್ತಿದ್ದಾರೆ, ಅವರ ಸಲಹೆಗಳಿಂದ ಕೆಲಸ ಮಾಡಲಾಗುತ್ತಿದೆ” ಎಂದು ಮೋದಿ ಹೇಳಿದರು.

“ಅಂತಹ ಸಂದರ್ಭದಲ್ಲಿ, ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತು ಕೋವಿಡ್ ವಿರುದ್ಧದ ಶಕ್ತಿಯಾಗಿದೆ. ನಮ್ಮ ಸಾಮೂಹಿಕ ಶಕ್ತಿ ಮಾತ್ರ ಕೋವಿಡ್ ಸೋಂಕನ್ನು ಸೋಲಿಸುತ್ತದೆ. ಈ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ನಾವು 2022 ಕ್ಕೆ ಪ್ರವೇಶಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next