Advertisement

ಗುಜರಾತ್ ನಲ್ಲಿ ಭೂಕಂಪವಾದಾಗ ಎರಡನೇ ದಿನವೇ ಬಂದೆ: ಪ್ರಧಾನಿ ಮೋದಿ

02:26 PM Aug 28, 2022 | Team Udayavani |

ಭುಜ್ : ಗುಜರಾತ್ ನಲ್ಲಿ ಭೂಕಂಪ ಸಂಭವಿಸಿದಾಗ ನನಗೆ ನೆನಪಿದೆ, ನಾನು ಎರಡನೇ ದಿನವೇ ಇಲ್ಲಿಗೆ ತಲುಪಿದೆ. ಆಗ ನಾನು ಸಿಎಂ ಆಗಿರಲಿಲ್ಲ, ಕೇವಲ ಕಾರ್ಯಕರ್ತನಾಗಿದ್ದೆ. ನಾನು ಎಷ್ಟು ಜನರಿಗೆ ಸಹಾಯ ಮಾಡಬಲ್ಲೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ನಿಮ್ಮೆಲ್ಲರೊಂದಿಗೆ ಇರಲು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ಭುಜ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿ ಮಾತನಾಡಿದರು.

ಇಂದು ನಮ್ಮ ಕಛ್ ನಲ್ಲಿ ಏನಿಲ್ಲ. ನಗರ ನಿರ್ಮಾಣದಲ್ಲಿ ನಮ್ಮ ಪರಿಣತಿಯು ಧೋಲಾವಿರಾದಲ್ಲಿ ಪ್ರತಿಫಲಿಸುತ್ತದೆ.ಕಳೆದ ವರ್ಷವಷ್ಟೇ ಧೋಲಾವೀರಾಗೆ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ನೀಡಲಾಗಿದೆ. ಧೋಲಾವೀರದ ಪ್ರತಿಯೊಂದು ಇಟ್ಟಿಗೆಯು ನಮ್ಮ ಪೂರ್ವಜರ ಕೌಶಲ್ಯ, ಜ್ಞಾನ ಮತ್ತು ವಿಜ್ಞಾನವನ್ನು ಪ್ರತಿಬಿಂಬಿಸುತ್ತದೆ ಎಂದರು.

ಇಂದು ದೇಶದಲ್ಲಿ ನಡೆಯುತ್ತಿರುವ ಗ್ರೀನ್ ಹೌಸ್ ಅಭಿಯಾನದಲ್ಲಿ ಗುಜರಾತ್ ನ ಪಾತ್ರ ದೊಡ್ಡದಿದೆ. ಅದೇ ರೀತಿ ಗುಜರಾತ್ ವಿಶ್ವದ ಗ್ರೀನ್ ಹೌಸ್ ರಾಜಧಾನಿಯಾಗಿ ತನ್ನ ಛಾಪು ಮೂಡಿಸಿದಾಗ, ಕಚ್ ಅದರಲ್ಲಿ ದೊಡ್ಡ ಕೊಡುಗೆಯನ್ನು ಹೊಂದಿರುತ್ತದೆ ಎಂದರು.

ಗುಜರಾತ್‌ನಲ್ಲಿ ಒಂದರ ಹಿಂದೊಂದು ಬಿಕ್ಕಟ್ಟು ಬರುತ್ತಿದ್ದ ಕಾಲವೊಂದಿತ್ತು.ಗುಜರಾತ್ ಪ್ರಕೃತಿ ವಿಕೋಪವನ್ನು ಎದುರಿಸುತ್ತಿರುವಾಗ, ಪಿತೂರಿಗಳು ಪ್ರಾರಂಭವಾದವು. ಗುಜರಾತಿಗೆ ದೇಶ ಹಾಗೂ ವಿಶ್ವದಲ್ಲಿ ಮಾನಹಾನಿ ಮಾಡುವ ಉದ್ದೇಶದಿಂದ ಇಲ್ಲಿನ ಬಂಡವಾಳ ಹೂಡಿಕೆಯನ್ನು ತಡೆಯಲು ಒಂದರ ಹಿಂದೆ ಒಂದು ಷಡ್ಯಂತ್ರ ರೂಪಿಸಲಾಯಿತು ಎಂದು ಮನದಲ್ಲಿದ್ದ ನೋವು, ಆಕ್ರೋಶ ಹೊರ ಹಾಕಿದರು.

Advertisement

ಇಂತಹ ಪರಿಸ್ಥಿತಿಯಲ್ಲೂ ಒಂದೆಡೆ ಗುಜರಾತ್ ”ವಿಪತ್ತು ನಿರ್ವಹಣಾ ಕಾಯ್ದೆ”ಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಈ ಕಾಯಿದೆಯ ಪ್ರೇರಣೆಯಿಂದ ಇಡೀ ದೇಶಕ್ಕೆ ಇದೇ ಕಾನೂನನ್ನು ರೂಪಿಸಲಾಯಿತು ಎಂದರು.

2001ರಲ್ಲಿ ಸಂಪೂರ್ಣ ನಾಶವಾದ ಕಚ್‌ನಲ್ಲಿ ಆಗಿರುವ ಕೆಲಸ ಊಹೆಗೂ ನಿಲುಕದ್ದು.ಕ್ರಾಂತಿಗುರು ಶ್ಯಾಮ್‌ಜಿ ಕೃಷ್ಣವರ್ಮ ವಿಶ್ವವಿದ್ಯಾನಿಲಯವನ್ನು 2003 ರಲ್ಲಿ ಕಚ್‌ನಲ್ಲಿ ರಚಿಸಲಾಯಿತು, ಆದರೆ 35 ಕ್ಕೂ ಹೆಚ್ಚು ಹೊಸ ಕಾಲೇಜುಗಳನ್ನು ಸಹ ಸ್ಥಾಪಿಸಲಾಗಿದೆ ಎಂದರು.

ಆ ಕಷ್ಟದ ದಿನಗಳಲ್ಲಿ ‘ವಿಪತ್ತನ್ನು ಅವಕಾಶವನ್ನಾಗಿ ಮಾಡಿಕೊಳ್ಳುತ್ತೇವೆ’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದೆ.ಇಂದು ನಾನು ಹೇಳುತ್ತೇನೆ, 2047 ರ ವೇಳೆಗೆ ಭಾರತವು ‘ಅಭಿವೃದ್ಧಿ ಹೊಂದಿದ ದೇಶ’ ಆಗಲಿದೆ ಎಂದರು.

2001 ರಲ್ಲಿ ಕಚ್ ಜಿಲ್ಲೆಯ ಭುಜ್ ನಲ್ಲಿ ಭಾರತದ 52 ನೇ ಗಣರಾಜ್ಯೋತ್ಸವದ ಜನವರಿ 26 ರಂದು ಬೆಳಗ್ಗೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ದುರಂತದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಮತ್ತು ಲಕ್ಷಾಂತರ ಜನರು ಗಾಯಗೊಂಡಿದ್ದರು. ಸುಮಾರು 3,40,000 ಕಟ್ಟಡಗಳು ನಾಶಗೊಂಡಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next