Advertisement

ಗಾಂಧಿ ಕುಟುಂಬ ಹೊರತಾದ ಅಧ್ಯಕ್ಷರನ್ನು ನೇಮಿಸಿ; ಕೈಗೆ ಪ್ರಧಾನಿ ಸವಾಲು

02:43 PM Nov 16, 2018 | |

ಅಂಬಿಕಾಪುರ: ಐದು ವರ್ಷಗಳ ಕಾಲಕ್ಕೆ  ಗಾಂಧಿ ಕುಟುಂಬ ಹೊರತಾಗಿ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಕಾಂಗ್ರೆಸ್‌ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೇರ ಸವಾಲು ಎಸೆದಿದ್ದಾರೆ. 

Advertisement

ಶುಕ್ರವಾರ 2 ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತ ಪ್ರಚಾರ ನಡೆಸಲು ಆಗಮಿಸಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. 

ಕಾಂಗ್ರೆಸ್‌ ಎಲ್ಲಿಯಾದರೂ ಗಾಂಧಿ ಕುಟುಂಬದ ಹೊರತಾಗಿ ಉತ್ತಮ ನಾಯಕನನ್ನು ಅಧ್ಯಕ್ಷನನ್ನಾಗಿ 5 ವರ್ಷಗಳ ಅವಧಿಗೆ ನೇಮಕ ಮಾಡಿದರೆ ನಾನು ನೆಹರೂ ಜಿ ಅವರು ನಿಜವಾಗಿ ಪ್ರಜಾಪ್ರಭುತ್ವ ಪಕ್ಷವನ್ನು ಹುಟ್ಟು ಹಾಕಿದ್ದರು ಎಂದು ಒಪ್ಪುತ್ತೇನೆ ಎಂದರು. 

Advertisement

ನಾನು ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳಾಗಿವೆ. ಅವರು ಇನ್ನೂ ಚಾಯ್‌ವಾಲಾ ಹೇಗೆ ಪ್ರಧಾನಿ ಅದ ಎಂದು ಅಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next