Advertisement

ಸೌಲಭ್ಯ ಕೊಡದ ಹಿಂದಿನ ಸರಕಾರಗಳು: ಪ್ರಧಾನಿ

11:53 PM Oct 13, 2022 | Team Udayavani |

ಶಿಮ್ಲಾ: ದೇಶದಲ್ಲಿ ಈ ಹಿಂದೆ ಇದ್ದ ಸರಕಾರಗಳು ಲಭ್ಯವಿದ್ದ ಸೌಲಭ್ಯಗಳನ್ನು ಜನರಿಗೆ ತಲುಪಿಸಲೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದ್ದಾರೆ.

Advertisement

ಹಿಮಾಚಲ ಪ್ರದೇಶದ ಉನಾ ನಗರದಲ್ಲಿ ಗುರುವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಕೆಲವು ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಮೋದಿ ಈ ಮಾತುಗಳನ್ನಾಡಿದ್ದಾರೆ. “ನಮ್ಮ ಸರಕಾರ 21ನೇ ಶತಮಾನದ ಸೌಲಭ್ಯಗಳನ್ನು ಕೊಡುವುದರ ಜತೆ ಯಲ್ಲಿ ಈ ಹಿಂದಿನ ಸರಕಾರ ಕೊಡದೇ ಉಳಿಸಿಕೊಂಡ 20ನೇ ಶತಮಾನದ ಸೌಲಭ್ಯಗಳನ್ನೂ ಕೊಡುತ್ತಿದೆ’ ಎಂದು ಹೇಳಿದರು. ನೂತನ ಭಾರತವು ಹಿಂದಿನ ಸವಾಲು ಗಳನ್ನು ಎದುರಿಸುವ ಜತೆಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದೂ ಅವರು ಹೇಳಿದರು.

ಲೋಕಾರ್ಪಣೆ  -ಶಂಕುಸ್ಥಾಪನೆ: ಇದೇ ವೇಳೆ ಪ್ರಧಾನಿ ಅವರು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ 3ನೇ ಹಂತವನ್ನು ಹಿಮಾಚಲದಲ್ಲಿ ಆರಂಭಿಸಿ ದ್ದಾರೆ. ಈ ಹಂತದಲ್ಲಿ ಗ್ರಾಮೀಣ ಭಾಗಗಳಲ್ಲಿ 3,125ಕಿ.ಮೀ ರಸ್ತೆ ನಿರ್ಮಿ ಸಲಾಗುವುದು. ಕಳೆದ 8 ವರ್ಷಗಳಲ್ಲಿ ಹಿಮಾಚಲದ ಗ್ರಾಮೀಣ ಭಾಗಗಳಲ್ಲಿ 12,000ಕಿ.ಮೀ ರಸ್ತೆ ನಿರ್ಮಿಸಲಾಗಿದೆ  ಎಂದು ಅವರು ತಿಳಿಸಿದರು. 2,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಬಲ್ಕ್ ಡ್ರಗ್‌ ಪಾರ್ಕ್‌ಗೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಪಾರ್ಕ್‌ 10,000 ಕೋಟಿ ಹೂಡಿಕೆ ಯನ್ನು ಆಕರ್ಷಿಸಲಿದೆ ಎಂದು ಹೇಳಿದ್ದಾರೆ.

4ನೇ ವಂದೇ ಭಾರತ್‌ ಹಳಿಗೆ: ಉನಾ ರೈಲ್ವೇ ನಿಲ್ದಾಣದಿಂದ ಹೊಸದಿಲ್ಲಿಗೆ ಸಂಚರಿಸುವ ವಂದೇ ಭಾರತ್‌ ರೈಲಿಗೆ ಪ್ರಧಾನಿ ಗುರುವಾರ ಹಸುರು ನಿಶಾನೆ ತೋರಿದ್ದಾರೆ. ದೇಶದ 4ನೇ ವಂದೇ ಭಾರತ್‌ ರೈಲಾಗಿರುವುದು. ಇದು ಬುಧವಾರ ಹೊರತುಪಡಿಸಿ ವಾರದ 6 ದಿನ ಸಂಚಾರ ನಡೆಸಲಿದೆ. ಈ ರೈಲಿ ನಿಂದಾಗಿ ರಾಜ್ಯದಲ್ಲಿ ಪ್ರವಾಸೋದ್ಯ ಮಕ್ಕೆ ಉತ್ತೇಜನ ಸಿಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next