Advertisement

ಮೊಮ್ಮಗಳ ನಿಧನ : ಜಿ.ಟಿ. ದೇವೇಗೌಡರಿಗೆ ಪ್ರಧಾನಿ ಮೋದಿ ಸಾಂತ್ವನ ಪತ್ರ

07:05 PM May 27, 2022 | Team Udayavani |

ಮೈಸೂರು : ಶಾಸಕ ಜಿ.ಟಿ.ದೇವೇಗೌಡ ಮೊಮ್ಮಗಳು ಗೌರಿ ವಿಧಿವಶವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದು ಸಾಂತ್ವನ ಹೇಳಿದ್ದು, ಪ್ರತಿಯಾಗಿ ಜಿ.ಟಿ. ದೇವೇಗೌಡ ಅವರು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದಲ್ಲಿ, ಜಿ ಟಿ ದೇವೇಗೌಡ ಜಿ, ನಿಮ್ಮ ಮೊಮ್ಮಗಳು ಗೌರಿ ಅವರ ನಿಧನದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ ಮತ್ತು ತೀವ್ರ ನೋವಾಗಿದೆ. ಇಷ್ಟು ಎಳೆ ವಯಸ್ಸಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಾಳೆ ಎಂದರೆ ನಂಬುವುದು ಅಸಾಧ್ಯ. ತೀವ್ರ ದುಃಖದ ಈ ಸಮಯದಲ್ಲಿ ನನ್ನ ಹೃತ್ಪೂರ್ವಕ ಸಂತಾಪಗಳುಅಂತಹ ಚಿಕ್ಕ ವಯಸ್ಸಿನಲ್ಲಿ ಮಗುವಿನ ನಷ್ಟವು ಪೋಷಕರಿಗೆ ಮತ್ತು ಅಜ್ಜನಾದ ನಿಮಗೆ ಅತ್ಯಂತ ಕಷ್ಟಕರ ಸಮಯವಾಗಿದೆ. ಕುಟುಂಬಕ್ಕೆ ಆದ ನಷ್ಟ ಪದಗಳಿಗೆ ಮೀರಿದೆ. ಗೌರಿ ಬಿಟ್ಟು ಹೋಗಿರುವ ನೆನಪುಗಳು ಕುಟುಂಬಕ್ಕೆ ಸಾಂತ್ವನ ನೀಡಲಿ. ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ಮತ್ತು ಹಿತೈಷಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.

ಜಿ.ಟಿ. ದೇವೇಗೌಡರ ನಮನಗಳು

ಪ್ರಧಾನಿ ನರೇಂದ್ರ ಮೋದಿಜೀ ಅವರು ನಮ್ಮ ಕುಟುಂಬದ ಕಂದನ ಆಕಸ್ಮಿಕ ನಿಧನದ ಸುದ್ದಿಯನ್ನು ತಿಳಿದು ತಮ್ಮೆಲ್ಲ ಕಾರ್ಯಗಳ ಮಧ್ಯೆಯೂ ಅತ್ಯಂತ ಅಂತಃಕರಣಪೂರಿತ ಸಂತಾಪ ಸೂಚನೆಯನ್ನು ಒಳಗೊಂಡ ಪತ್ರವೊಂದನ್ನು ಬರೆದು, ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ದುಃಖದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿ ಕಂದನ ನಿಧನ ಅತ್ಯಂತ ದುಃಖಪೂರಿತವಾದುದೆಂದು, ನಿಧನದ ದುಃಖವನ್ನು ಸಹಿಸುವುದು ಅತ್ಯಂತ ಕಷ್ಟದಾಯಕವಾದುದೆಂದು ವಿವರಿಸಿ ಕಂದನ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಹಾರೈಸಿದ್ದಾರೆ. ಅದರ ಜತೆಗೆ ನನ್ನ ಮತ್ತು ನನ್ನ ಕುಟುಂಬಕ್ಕೆ ಕಂದನ ನಿಧನ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನನ್ನು ಪ್ರಾರ್ಥಿಸಿದ್ದಾರೆ. ಪ್ರಧಾನಿಯವರ ಸಂತಾಪ ಸೂಚನೆ ನಮ್ಮಲ್ಲಿ ಅತ್ಯಂತ ಕೃತಜ್ಞತಾಭಾವನೆಯನ್ನು ಉಂಟು ಮಾಡಿದೆ. ರಾಷ್ಟ್ರದ ಬಗ್ಗೆ ಸದಾ ಚಿಂತಿಸುವ ಅತ್ಯಂತ ಉನ್ನತ ಸ್ಥಾನದಲ್ಲಿರುವ ಪ್ರಧಾನಿಯವರು ಕುಟುಂಬದಲ್ಲಾದ ದುರ್ಘಟನೆಯ ಬಗ್ಗೆ ಅತ್ಯಂತ ಕಾಳಜಿಯನ್ನು ವಹಿಸಿ, ಪತ್ರವನ್ನು ಬರೆಯುವ ಮೂಲಕ ನನಗೆ ಹಾಗೂ ಕುಟುಂಬದವರಿಗೆ ಧೈರ್ಯವನ್ನು ತುಂಬಿದುದಕ್ಕಾಗಿ ಹಾಗೂ ನಮ್ಮ ದುಃಖದಲ್ಲಿ ಪಾಲ್ಗೊಂಡಿದುದ್ದಕ್ಕಾಗಿ ನಾನು ಹಾಗೂ ನನ್ನ ಕುಟುಂಬದ ಎಲ್ಲಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿಜೀ ರವರಿಗೆ ತುಂಬು ಹೃದಯದ ನಮನಗಳು ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next