Advertisement

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

11:58 PM Sep 16, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವಾದ ಸೆ. 17ರಿಂದ ಅ. 2ರ ಗಾಂಧಿ ಜಯಂತಿ ಬಿಜೆಪಿ ಸೇವಾ ಪಾಕ್ಷಿಕ ನ‌ಡೆಯಲಿದ್ದು, ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸೆ. 17 ಮೋದಿಯವರ ಜನ್ಮದಿನ, ಸೆ. 25 ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಜನ್ಮದಿನ ಮತ್ತು ಅ. 2ರಂದು ಗಾಂಧಿ ಜಯಂತಿ ನಿಮಿತ್ತ ಈ ಸೇವಾ ಕಾರ್ಯ ನಡೆಯಲಿದೆ. ಒಟ್ಟು 15 ದಿನಗಳ ಸೇವಾ ಕಾರ್ಯ ಚಟುವಟಿಕೆಗಳ ಮೇಲ್ವಿಚಾರಣೆಗೆ ರಾಜ್ಯಮಟ್ಟದಲ್ಲಿ ಉಸ್ತುವಾರಿ ನೇಮಕವಾಗಿದೆ.

ಹಾಗೆಯೇ ತಲಾ 4 ಜನರನ್ನು ಒಳಗೊಂಡ ಜಿಲ್ಲಾ , ಮಂಡಲಮಟ್ಟದಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಯುವ ಮೋರ್ಚಾ ನೇತೃತ್ವದಲ್ಲಿ ಮಂಗಳವಾರ ರಕ್ತದಾನ ಶಿಬಿರ, ಸೆ. 18ರಿಂದ 24ರ ವರೆಗೆ ಶಾಲೆ, ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ, ಸಾಧಕ ಅಂಗವಿಕಲ ಕ್ರೀಡಾಪಟುಗಳಿಗೆ ಸನ್ಮಾನ, ಸಹಾಯಕ ಸಲಕರಣೆ ವಿತರಿಸಲಾಗುವುದು. ಸೆ. 23ರ ಆಯುಷ್ಮಾನ್‌ ಭಾರತ್‌ ಯೋಜನೆ ಕಾರ್ಯಕ್ರಮದಡಿ ಮೋದಿಯವರ ಜೀವನ, ಸಾಧನೆ ಕುರಿತು ಚಿತ್ರಪ್ರದರ್ಶನ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ನಡೆಯಲಿದೆ. ವಿವಿಧೆಡೆ ವಿಚಾರಗೋಷ್ಠಿ ಜಿಲ್ಲಾ ಮಟ್ಟದಲ್ಲಿ ಕಲೆ, ಚಿತ್ರಕಲೆ, ರಂಗೋಲಿ, ಭಾಷಣ, ಪ್ರಬಂಧ, ಮರಳು ಕಲೆ, ಗ್ರಾಫಿಕ್‌ ವಿನ್ಯಾಸ ಸ್ಪರ್ಧೆಗಳು ನಡೆಯಲಿವೆ ಎಂದರು. ಸೆ.25ರಂದು ದೀನದಯಾಳ್‌ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪನಮನ, ಅ. 2ರ ಗಾಂಧಿ ಹಾಗೂ ಲಾಲ್‌ ಬಹದೂರ್‌ ಶಾಸ್ತ್ರಿ ಜಯಂತಿ ನಿಮಿತ್ತ ಮಹನೀಯರ ಪ್ರತಿಮೆಗಳನ್ನು ಸ್ವಚ್ಛಗೊಳಿಸಿ ಪುಷ್ಪ ನಮನ ಸಲ್ಲಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next