Advertisement

ಚೌಕಿದಾರನನ್ನು ತಡೆಯಲಾಗದು,ಯಾರನ್ನೂ ಬಿಡಲ್ಲ: ಮೋದಿ ಗುಡುಗು

09:21 AM Jan 12, 2019 | Team Udayavani |

ಹೊಸದಿಲ್ಲಿ: ಚೌಕಿದಾರನನ್ನು ಯಾರಿಂದಲೂ ತಡೆಯಲಾಗದು, ಭ್ರಷ್ಟಾಚಾರ, ಅನ್ಯಾಯ ಮಾಡುವ ಯಾರನ್ನೂ ಬಿಡುವವನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.  

Advertisement

ನವದೆಹಲಿಯ ರಾಮಲೀಲಾ ಮೈದಾನದಲ್ಲಿ  ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು ಕಾಂಗ್ರೆಸ್‌ ವಿರುದ್ಧ ನಿರಂತರ ವಾಗ್ಧಾಳಿ ನಡೆಸಿ ಚುನಾವಣಾ ರಣ ಕಹಳೆ ಮೊಳಗಿಸಿದ್ದಾರೆ.

ಹಿಂದಿನ ಸರ್ಕಾರಗಳು ರಾಷ್ಟ್ರವನ್ನು ಕತ್ತಲೆಯ ಕೂಪಕ್ಕೆ ನೂಕಿದ್ದವು ಎಂದ ಅವರು ಕೇಂದ್ರದ ಯಾವುದಾದರೂ ಯೋಜನೆಗೆ ನನ್ನ ಹೆಸರು ಹಾಕಿಕೊಂಡಿದ್ದೇನಾ? ಹಿಂದೆ ವ್ಯಕ್ತಿಗಳ ಹೆಸರಿನಿಂದ ಯೋಜನೆಗಳು ಆರಂಭವಾಗುತ್ತಿದ್ದವು. ನಮ್ಮ ಪಕ್ಷದ ಸಿದ್ಧಾಂತವೇ ಹಾಗೆ ಮೊದಲು ದೇಶ ಆ ಬಳಿಕ ವ್ಯಕ್ತಿ  ಎಂದರು. 

ಒಂದು ಕಾಲದಲ್ಲಿ  ನಮ್ಮ ಪಕ್ಷ 2 ಕೋಣೆಗಳಲ್ಲಿ ಕಾರ್ಯ ನಡೆಸುತ್ತಿತ್ತು,ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕಾರಿಣಿ ನಡೆಯುತ್ತಿದೆ.ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ನಾವು ನೆನೆಯಬೇಕಾಗಿದೆ. ಇದೇ ಮೊದಲ ಬಾರಿಗೆ ಅವರಿಲ್ಲದೆ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದೆ ಎಂದರು. 

ಆಯೋಧ್ಯೆ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ  ಮುಖ್ಯ ನ್ಯಾಯಾಧೀಶರ ಮೇಲೆ ಆರೋಪ ಹೊರಿಸಿ ಮಹಾವಿಯೋಗ ನಡೆಸಲು ಮುಂದಾಗಿತ್ತು. ತೀರ್ಪು ವಿಳಂಬವಾಗಲು ಕಾಂಗ್ರೆಸ್‌ ಕಾರಣವಾಗಿದೆ ಎಂದು ಕಿಡಿ ಕಾರಿದರು. 

Advertisement

ನಮ್ಮ ಪ್ರತಿಯೋಜನೆಗೂ ಕಾಂಗ್ರೆಸ್‌ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ, ಜಿಎಸ್‌ಟಿ ಸೇರಿದಂತೆ ಎಲ್ಲಾ ಯೋಜನೆಗಳನ್ನು ಲೇವಡಿ ಮಾಡಿತ್ತು ಎಂದರು. 

ನಿಮಗೆ ಯಾವ ರೀತಿಯ ಪ್ರಧಾನ ಸೇವಕ ಬೇಕು? ದಿನದ 18 ಗಂಟೆ ಕೆಲಸ ಮಾಡುವ ವ್ಯಕ್ತಿ ಬೇಕಾ? ಮೂರ್‍ನಾಲ್ಕು ತಿಂಗಳು ರಜೆ ತೆಗೆದುಕೊಂಡು ಹೋಗುವ ವ್ಯಕ್ತಿ ಬೇಕಾ ಎಂದು ರಾಹುಲ್‌ ಗಾಂಧಿಯವರನ್ನು ಪರೋಕ್ಷವಾಗಿ ಲೇವಡಿ ಮಾಡಿದರು. 

ದೇಶದಲ್ಲಿ ಸಮರ್ಥ ಮತ್ತು ಪಾರದರ್ಶಕ ಆಡಳಿತ ನೀಡುವ ಗುರಿ ನಮ್ಮದು ಎಂದರು. 

1 ಗಂಟೆ 23 ನಿಮಷಗಳ ಕಾಲ ಸುದೀರ್ಘ‌ ಭಾಷಣವನ್ನು ಪ್ರಧಾನಿ ಮೋದಿ ಅವರು ಮಾಡಿ ಕಾರ್ಯಕರ್ತರಿಗೆ ಸಂದೇಶ ರವಾನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next