Advertisement
ಮೋದಿ ಅವರನ್ನು ಈಜಿಪ್ಟ್‌ನ ಪ್ರಧಾನಿ ಮೊಸ್ತಫಾ ಮಡ್‌ಬೌಲಿ ಅವರು ಗಾಢ ಆಲಿಂಗನದೊಂದಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಮೋದಿ ಅವರಿಗೆ ಔಪಚಾರಿಕ ಸ್ವಾಗತ ಮತ್ತು ಗಾರ್ಡ್ ಆಫ್ ಹಾನರ್ ನೀಡಲಾಯಿತು. 26 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ನಡೆಸುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.
Related Articles
Advertisement
ದಾವೂದಿ ಬೊಹ್ರಾ ಸಮುದಾಯದ ನೆರವಿನಿಂದ ನವೀಕರಿಸಲಾದ 11ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಭಾನುವಾರ ಮೋದಿ ಭೇಟಿ ನೀಡಲಿದ್ದಾರೆ. ಭಾರತದಲ್ಲಿ ಬೊಹ್ರಾ ಸಮುದಾಯವು ವಾಸ್ತವವಾಗಿ ಫಾತಿಮಾ ರಾಜವಂಶದಿಂದ ಹುಟ್ಟಿಕೊಂಡಿದೆ ಮತ್ತು ಅವರು 1970 ರ ದಶಕದಲ್ಲಿ ಮಸೀದಿಯನ್ನು ನವೀಕರಿಸಿದ್ದಾರೆ.
ವಿಶ್ವ ಸಮರ-1 ರ ಸಮಯದಲ್ಲಿ ಈಜಿಪ್ಟ್‌ಗಾಗಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಈ ಸ್ಮಾರಕವನ್ನು ಕಾಮನ್‌ವೆಲ್ತ್ ನಿರ್ಮಿಸಿದೆ, ಆದರೂ ಇದನ್ನು ಈಜಿಪ್ಟ್‌ನಲ್ಲಿ ವಿವಿಧ ಮೊದಲ ವಿಶ್ವ ಯುದ್ಧದ ಸಂಘರ್ಷಗಳಲ್ಲಿ ತಮ್ಮ ಪ್ರಾಣ ಕಳೆದುಕೊಂಡ 3,799 ಭಾರತೀಯ ಸೈನಿಕರಿಗೆ ಸಮರ್ಪಿಸಲಾಗಿದೆ.