Advertisement

ಇಂಡೋನೇಶ್ಯ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ: ಮೋದಿ ಕೊಡುಗೆ

05:14 PM May 30, 2018 | udayavani editorial |

ಜಕಾರ್ತಾ : ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಶ್ಯ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ ಕೊಡುಗೆಯನ್ನು ನೀಡಿದ್ದಾರೆ. ಈ ಕೊಡುಗೆಯನ್ನು ಬಳಸಿಕೊಂಡು ಭಾರತೀಯ ಮೂಲದ ಇಂಡೋನೇಶ್ಯ ಪ್ರಜೆಗಳು “ನವ ಭಾರತ’ವನ್ನು ಕಾಣಲು ತಮ್ಮ  ಮೂಲ ದೇಶಕ್ಕೆ ಭೇಟಿ ನೀಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Advertisement

ಇಂಡೋನೇಶ್ಯದ ರಾಜಧಾನಿಯಾಗಿರುವ ಜಕಾರ್ತಾದಲ್ಲಿನ ಕನ್‌ವೆನ್‌ಶನ್‌ ಸೆಂಟರ್‌ನಲ್ಲಿ  ಭಾರತೀಯ ಬಾಹುಳ್ಯವನ್ನು ಉದ್ದೇಶಿಸಿ ಮಾತನಾಡುತ್ತಾ “ನಮ್ಮ ದೇಶಗಳ ಹೆಸರಿನಲ್ಲಿ ಸಾಮ್ಯತೆ ಇರುವುದು ಮಾತ್ರವಲ್ಲದೆ ಉಭಯ ದೇಶಗಳ ಮಿತೃತ್ವ ಕೂಡ ವಿಶಿಷ್ಟವೂ ಅನನ್ಯವೂ ಆಗಿ ಧ್ವನಿಸುತ್ತದೆ’ ಎಂದು ಹೇಳಿದರು. 

“ನಿಮ್ಮಲ್ಲಿ ಅನೇಕರು ಇದುವರೆಗೂ ಭಾರತಕ್ಕೆ ಭೇಟಿ ಕೊಟ್ಟಿಲ್ಲ. ಮುಂದಿನ ವರ್ಷ ಪ್ರಯಾಗ್‌ನಲ್ಲಿ ನಡೆಯುವ ಕುಂಭ ಮೇಳಕ್ಕೆ ನೀವೆಲ್ಲರೂ ಬರಬೇಕೆಂದು ನಾನು ಅಹ್ವಾನಿಸುತ್ತಿದ್ದೇನೆ. ಇಂಡೋನೇಶ್ಯದ ಪ್ರಜೆಗಳಿಗಾಗಿ ನಾವು 30 ದಿನಗಳ ಉಚಿತ ವೀಸಾ ಕೊಡುಗೆ ನೀಡುತ್ತಿದ್ದೇವೆ. ಇದನ್ನು ಬಳಸಿಕೊಂಡು ನೀವೆಲ್ಲ ಒಮ್ಮೆ  ನಿಮ್ಮ ಮೂಲ ದೇಶವಾಗಿರುವ ಭಾರತಕ್ಕೆ ಭೇಟಿ ಕೊಡಿ’ ಎಂದು ಮೋದಿ ನೆರೆದ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಹೇಳಿದರು. 

ಈ ಭುವಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಂಗಮಿಸುವ ಧಾರ್ಮಿಕ ಉತ್ಸವಗಳಲ್ಲಿ ಪ್ರಯಾಗದ ಕುಂಭ ಮೇಳವೂ ಒಂದೆನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next