Advertisement
ಭಾರತೀಯ ಕಾಲಮಾನದ ಪ್ರಕಾರ ಹ್ಯೂಸ್ಟನ್‌ನಲ್ಲಿ ಭಾನುವಾರ ರಾತ್ರಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಲು ತೆರಳಿದ್ದ ಶಿರಸಿ ಮೂಲದ ಸಾತ್ವಿಕ್ ಹೆಗಡೆ, ಅಮೆರಿಕದ ಟೆಕ್ಸಾಸ್‌ನ ಲೂಯಿಸ್ ಡಿ ಬ್ರಾಂಡಿಸ್ ಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿದ್ದಾನೆ.
ಹೌಡಿ ಮೋದಿ ಕಾರ್ಯಕ್ರಮದ ವೇದಿಕೆಗೆ ಮೋದಿ ಮತ್ತು ಟ್ರಂಪ್ ಆಗಮಿಸುವುದಕ್ಕೂ ಮುನ್ನ ಸುಮಾರು ಒಂದೂವರೆ ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಹಲವು ಮಕ್ಕಳೂ ಭಾಗವಹಿಸಿದ್ದರು. ಮೋದಿ ಹಾಗೂ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಇಬ್ಬರೂ ನಾಯಕರು, ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವು ಮಕ್ಕಳನ್ನು ಭೇಟಿ ಮಾಡಿದರು. ಈ ವೇಳೆ ಸಾಲಾಗಿ ನಿಂತ ಮಕ್ಕಳ ಒಂದು ಅಂಚಿನಲ್ಲಿ ಸಾತ್ವಿಕ್ ಕೂಡ ನಿಂತಿದ್ದ. ಇಬ್ಬರೂ ನಾಯಕರು ತನ್ನ ಬಳಿ ಬಂದಾಗ, ಟ್ರಂಪ್ ಬಳಿ ಒಂದು ಸೆಲ್ಫಿ ತೆಗೆಯಬಹುದೇ ಎಂದು ಸಾತ್ವಿಕ್ ವಿನಂತಿಸಿದ. ತಕ್ಷಣ ಟ್ರಂಪ್ ಒಪ್ಪಿಕೊಂಡರು. ಅಷ್ಟೇ ಅಲ್ಲ, ಎರಡು ಹೆಜ್ಜೆ ಮುಂದೆ ನಡೆದಿದ್ದ ಮೋದಿಯನ್ನೂ ಕರೆದು ಸಾತ್ವಿಕ್ ಜೊತೆಗೆ ಸೆಲ್ಫಿಗೆ ಪೋಸು ನೀಡಿದರು. ಸೆಲ್ಫಿ ತೆಗೆದುಕೊಂಡ ನಂತರ ಸಾತ್ವಿಕ್ ಬೆನ್ನು ತಟ್ಟಿ ಮೋದಿ ಮೆಚ್ಚುಗೆ ಸೂಚಿಸಿದರು.
Related Articles
ಈ ಸೆಲ್ಫಿ ಈಗ ಟ್ವಿಟರ್ ಹಾಗೂ ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಸೃಷ್ಟಿಸಿದೆ. ಈ 9 ವರ್ಷದ ಬಾಲಕನ ಜೀವನದಲ್ಲಿ ಮರೆಯಲಾಗದ ಸೆಲ್ಫಿ ಇದು ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಬಾಲಕನ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ಈ ಸೆಲ್ಫಿ ಮತ್ತು ವೀಡಿಯೋ ಪವರ್‌ಫುಲ್ ಸೆಲ್ಫಿ ಎಂಬ ಹೆಸರಿನಲ್ಲಿ ಟ್ರೆಂಡ್ ಆಗಿದೆ. ಲಕ್ಷಾಂತರ ಜನರು ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
Advertisement
ಅಷ್ಟೇ ಅಲ್ಲ, ಈ ವಿಡಿಯೋವನ್ನು ಪ್ರಧಾನಿ ಮೋದಿ ಕೂಡ ಟ್ವಿಟರ್‌ನಲ್ಲಿ ಶೇರ್ ಮಾಡಿ, ಹೌಡಿ ಮೋದಿ ಕಾರ್ಯಕ್ರಮದ ನೆನಪಿಡಬಹುದಾದ ಘಳಿಗೆ ಎಂದು ಅವರು ಶೀರ್ಷಿಕೆ ನೀಡಿದ್ದಾರೆ.