Advertisement
ಗುರುವಾರ ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯದ ಗೊತ್ತುವಳಿ ಚರ್ಚೆಗೆ ಉತ್ತರವಾಗಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷ ಕಾಂಗ್ರೆಸ್‌ಗೆ ಗೊತ್ತಿರುವುದು ಎರಡೇ ಪದ. ಅವೆಂದರೆ, ಬಿಫೋರ್ ಕಾಂಗ್ರೆಸ್(ಬಿ.ಸಿ) ಮತ್ತು ಆಫ್ಟರ್ ಡೈನಾಸ್ಟಿ(ಎ.ಡಿ.). ಅಂದರೆ, ಕಾಂಗ್ರೆಸ್‌ಗೆ ಮುನ್ನಮತ್ತು ವಂಶಾಡಳಿತದ ನಂತರಎಂದು ಅರ್ಥ. ಬಿಫೋರ್ ಕಾಂಗ್ರೆಸ್ ಅಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಏನೂ ಇರಲಿಲ್ಲ ಎಂದೂ, ಆಫ್ಟರ್ ಡೈನಾಸ್ಟಿ ಎಂದರೆ ದೇಶದಲ್ಲಿ ಏನಾದರೂ ಆಗಿದೆಯೆಂದರೆ ಅದು ವಂಶಾಡಳಿತ ಕೊನೆಗೊಂಡ ಬಳಿಕ ಎಂದು ಅರ್ಥ ಎನ್ನುವ ಮೂಲಕ ನೆಹರೂ-ಗಾಂಧಿ ಕುಟುಂಬವನ್ನು ಕುಟುಕಿದ್ದಾರೆ.
ಭಾಷಣದ ವೇಳೆ ಸಾಲ ಮನ್ನಾ ವಿಚಾರದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಸಮರ್ಥ ಉತ್ತರ ನೀಡಿದ ಪ್ರಧಾನಿ, ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂಬ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. 43 ಲಕ್ಷ ರೈತರ ಪೈಕಿ ಕೇವಲ 5 ಸಾವಿರ ಮಂದಿಯ ಸಾಲ ಮಾತ್ರ ಮನ್ನಾ ಆಗಿದೆ. ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ನೋಡಿ ಕರ್ನಾಟಕದ ಮಣ್ಣಿನ ಮಗ ಇಲ್ಲಿಯೇ ಇದ್ದಾರೆ. ಅವರ ಪುತ್ರನ ನೇತೃತ್ವದ ಸರ್ಕಾರದ ಮಾಹಿತಿಯನ್ನೇ ಉಲ್ಲೇಖೀಸಿ ಹೇಳುತ್ತಿದ್ದೇನೆ
ಎಂದು ಲಘು ಧಾಟಿಯಲ್ಲಿ ಹೇಳಿದರು ಪ್ರಧಾನಿ ಮೋದಿ.