Advertisement

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

01:03 AM Dec 24, 2024 | Shreeram Nayak |

ಹೊಸದಿಲ್ಲಿ: ತಮ್ಮ ನೇತೃತ್ವದ ಸರಕಾರವು ಕಳೆದ ಒಂದು ಒಂದೂವರೆ ವರ್ಷದಲ್ಲಿ ಸುಮಾರು 10 ಲಕ್ಷ ಸರಕಾರಿ ಉದ್ಯೋಗಗಳನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Advertisement

ಸುಮಾರು 71 ಸಾವಿರ ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ರೋಜ್‌ಗಾರ್‌ ಮೇಳವನ್ನು ಸೋಮವಾರ ವರ್ಚುಯಲ್‌ ಆಗಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದಿನ ಯಾವುದೇ ಸರಕಾರಗಳು ಈ ರೀತಿಯಾಗಿ ಕಾಯಂ ಸರಕಾರಿ ಉದ್ಯೋಗಗಳನ್ನು ನೀಡಿಲ್ಲ ಎಂದು ಹೇಳಿಕೊಂಡರು.

ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಕಾಯ್ದುಕೊಳ್ಳಲಾಗಿದೆ. ಸರಕಾರದ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಯುವ ಜನತೆ ಕೇಂದ್ರ ಬಿಂದುವಾಗಿದ್ದಾರೆ ಎಂದು ಹೇಳಿದರು. ಹೊಸತಾಗಿ ನೇಮಕಗೊಂಡವರಲ್ಲಿ ಮಹಿಳೆಯರೇ ಹಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೇಂದ್ರ ಸರಕಾರ ಯುವಜನರನ್ನು ಉದ್ದೇಶಿಸಿಯೇ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದ್ದಾರೆ.

ಮಹಿಳೆಯರಿಗೆ 26 ವಾರಗಳ ಮಾತೃತ್ವ ರಜೆ ಒದಗಿಸಿದ್ದರಿಂದ ಅವರ ವೃತ್ತಿ ಜೀವನಕ್ಕೆ ಉಪಯೋ ಗವಾಗಿದೆ. ಅಲ್ಲದೇ ಪಿಎಂ ಆವಾಸ್‌ ಯೋಜನೆಯಲ್ಲಿ ನಿರ್ಮಾಣವಾದ ಬಹುತೇಕ ಮನೆಗಳ ಮಾಲಕರು ಮಹಿಳೆಯರೇ ಆಗಿದ್ದಾರೆ. ದೇಶದಲ್ಲಿ ಮಹಿಳಾ ಕೇಂದ್ರಿತ ಅಭಿವೃದ್ಧಿ ಕೈಗೂಡುತ್ತಿದೆ ಎಂದು ಇದೇ ವೇಳೆ ಹೇಳಿದರು.

ರೋಜ್‌ಗಾರ್‌ ಮೇಳದಿಂದ ಯುವ ಜನತೆಯ ಸಾಮರ್ಥ್ಯವನ್ನು ಹೊರಗೆ ಹಾಕಲು ಸಾಧ್ಯವಾಗುತ್ತಿದೆ. ಭಾರತದಲ್ಲಿ ಇಂದಿನ ಯುವ ಜನ ಪ್ರತೀ ಕ್ಷೇತ್ರದಲ್ಲಿ ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಮೋದಿ ಹೇಳಿದರು. ಇದೇ ವೇಳೆ ಅವರು ಭಾರತವು ಈಗ ವಿಶ್ವದಲ್ಲೇ 5ನೇ ಅತೀದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ ಎಂದು ಹೇಳಿದರು.

Advertisement

ರೋಜ್‌ಗಾರ್‌ ಮೇಳದಲ್ಲಿ ನೇಮಕಾತಿ ಪತ್ರ ವಿತರಣೆ
ಕೇಂದ್ರ ಸರ ಕಾ ರದ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಳ್ಳುವವರಿಗೆ ರೋಜ್‌ಗಾರ್‌ ಮೇಳ ಮೂಲಕ ನೇಮಕಾತಿ ಪತ್ರಗಳನ್ನು ಸರಕಾರ ವಿತರಿಸುತ್ತಾ ಬಂದಿದೆ. ಈ ಮೊದಲು 2024ರ ಅ.29ರಂದು ಕೂಡ 51 ಸಾವಿರಕ್ಕೂ ಅಧಿಕಕ್ಕೂ ಪತ್ರಗಳನ್ನು ವಿತರಿಸಲಾಗಿತ್ತು. ಫೆ.12ರಂದು 1 ಲಕ್ಷಕ್ಕೂ ಅಧಿಕ ಹಾಗೂ 2023ರ ನವೆಂಬರ್‌ನಲ್ಲಿ 51 ಸಾವಿರಕ್ಕೂ ಅಧಿಕ ಹಾಗೂ 2023ರ ಅಕ್ಟೋಬರ್‌ನಲ್ಲಿ 51 ಸಾವಿರಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ರೋಜ್‌ಗಾರ್‌ ಮೇಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಾಂತರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next