Advertisement

ದೇಶದಲ್ಲಿ ಕೋವಿಡ್ ಉಲ್ಬಣ : ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

05:45 PM Apr 18, 2021 | Team Udayavani |

ನವದೆಹಲಿ: ದೇಶದಲ್ಲಿ ಮಹಾಮಾರಿ ಕೋವಿಡ್-19 ಸೋಂಕು ಉಲ್ಬಣಿಸುತ್ತಿರುವ ಬೆನ್ನಲ್ಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

Advertisement

ಮೋದಿ ಅವರಿಗೆ ಭಾನುವಾರ ಪತ್ರ ಬರೆದಿರುವ ಸಿಂಗ್, ಕೋವಿಡ್-19 ವಿರುದ್ದದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿರುವ ವ್ಯಾಕ್ಸಿನೇಷನ್ ಹೆಚ್ಚಳಕ್ಕೆ ಪ್ರಯತ್ನಿಸಬೇಕು, ಎಷ್ಟು ಸಂಖ್ಯೆಯ ಲಸಿಕೆ ಹಾಕಲಾಗಿದೆ ಎಂಬುದನ್ನು ನೋಡಬಾರದು. ಲಸಿಕೆ ಪಡೆದ ಶೇಕಡಾವಾರು ಜನಸಂಖ್ಯೆ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದ್ದಾರೆ.

ಭಾರತ ಪ್ರಸ್ತುತ ತನ್ನ ಜನಸಂಖ್ಯೆಯ ಒಂದು ಸಣ್ಣ ಭಾಗಕ್ಕೆ ಮಾತ್ರ ಲಸಿಕೆ ನೀಡಿದೆ. ಸರಿಯಾದ ಯೋಜನೆಯೊಂದಿಗೆ ನಾವು ಹೆಚ್ಚು ಉತ್ತಮವಾಗಿ ಮತ್ತು ತ್ವರಿತವಾಗಿ ಲಸಿಕೆ ನೀಡಬೇಕಾಗಿದೆ.  ಸಾಂಕ್ರಾಮಿಕದ ವಿರುದ್ಧ ಹೋರಾಡಲು ನಾವು ಅನೇಕ ಕೆಲಸಗಳನ್ನು ಮಾಡಬೇಕು. ಆದರೆ,  ಈ ಪ್ರಯತ್ನದ ಒಂದು ದೊಡ್ಡ ಭಾಗವಾಗಿ ವ್ಯಾಕ್ಸಿನೇಷನ್ ಹೆಚ್ಚಳ ಮಾಡಬೇಕು.

ಲಸಿಕೆ ಉತ್ಪಾದಕರಿಗೆ ತ್ವರಿತವಾಗಿ ಹಣ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರವು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬೇಕು. ದೇಶದ ವಿವಿಧ ರಾಜ್ಯಗಳಿಗೆ ಬೇಡಿಕೆಗೆ ಅನುಗುಣವಾಗಿ ಯಾವ ಪ್ರಮಾಣದಲ್ಲಿ ಲಸಿಕೆ ಪೂರೈಸಲಾಗುತ್ತದೆ ಎಂಬುದನ್ನು ಪಾರದರ್ಶಕವಾಗಿ ಕೇಂದ್ರ ಸರ್ಕಾರ ತಿಳಿಸಬೇಕೆಂದು ಮನಮಹೋನ್ ಸಿಂಗ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next