Advertisement
ಪ್ರಧಾನಿ ಮೋದಿ ಅವರು ಜು.6ರ ವರೆಗೆ ಇಸ್ರೇಲ್‌ನಲ್ಲಿ ಇರುತ್ತಾರೆ. ಅದಕ್ಕೆ ಮುನ್ನ ಅವರು ಜರ್ಮನಿಯ ಹ್ಯಾಂಬರ್ಗ್ ಗೆ ಪ್ರಯಾಣಿಸಿ ಅಲ್ಲಿ ಜಿ-20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಪಾಲ್ಗೊಳುತ್ತಾರೆ.
Related Articles
Advertisement
“ಭಯೋತ್ಪಾದನೆಯಂತಹ ಸಮಾನ ಹಾಗೂ ಪ್ರಮುಖ ಭದ್ರತಾ ಸವಾಲುಗಳನ್ನು ನಿಭಾಯಿಸುವ ಬಗ್ಗೆಯೂ ನಾವು ಚರ್ಚಿಸಲಿದ್ದೇವೆ’ ಎಂದು ಮೋದಿ ತಿಳಿಸಿದ್ದಾರೆ.
ಇಸ್ರೇಲಿಗೆ ಭೇಟಿ ನೀಡುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಮೋದಿ, “ಈ ಅಭೂತಪೂರ್ವ ಭೇಟಿಯನ್ನು ಕಾತರದಿಂದ ಎದುರು ನೋಡುತ್ತಿರುವ ನಾನು, ಈ ಭೇಟಿ ಉಭಯ ದೇಶಗಳನ್ನು ಹಾಗೂ ಅವುಗಳ ಜನರನ್ನು ಇನ್ನಷ್ಟು ಸನಿಹಕ್ಕೆ ತರುವಂತಾಗಲೆಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.