Advertisement

ಪಿಎಂ ಕಿಸಾನ್‌ ಟ್ರಾಕ್ಟರ್‌ ಯೋಜನೆಯ ಮೂಲಕ 5 ಲಕ್ಷ ಸಬ್ಸಿಡಿ, ಸುದ್ದಿಯ ಅಸಲಿಯತ್ತೇನು?

02:55 PM Oct 09, 2021 | Team Udayavani |

ನವದೆಹಲಿ: ಪಿ.ಎಂ ಕಿಸಾನ್‌ ಟ್ರಾಕ್ಟರ್‌ ಯೋಜನೆಗೆ ಸಂಬಂಧಿಸಿದಂತೆ 5 ಲಕ್ಷ ರೂಪಾಯಿಗಳ ಸಹಾಯಧನ ಕೇಂದ್ರ ಸರ್ಕಾರದ ವತಿಯಿಂದ ದೊರೆಯುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಭಾವ ಚಿತ್ರದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

Advertisement

ʼಪ್ರೆಸ್‌ ಇನ್ಪಾರ್ಮೇಷನ್‌ ಬ್ಯೂರೋʼ (ಪಿಐಬಿ)ದ ಮಾಹಿತಿಯ ಪ್ರಕಾರ ಈ ಯೋಜನೆಯ ಮೂಲಕ ಯಾರೇ ಇಂತಹ ಮಾಹಿತಿಗಳನ್ನು ಹರಡಿದ್ದರೂ ಅವು ನಕಲಿಯಾಗಿರುತ್ತದೆ. ಕೇಂದ್ರ ಸರ್ಕಾರವು ಪಿಎಂ ಕಿಸಾನ್‌ ಟ್ರಾಕ್ಟರ್‌ ಯೋಜನೆಯ ಅಡಿಯಲ್ಲಿ ಯಾವುದೇ ರೀತಿಯ ಸಹಾಯಧನಗಳನ್ನು ಘೋಷಿಸಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಇದನ್ನೂ ಓದಿ;- ಅಭ್ಯರ್ಥಿ ಹೈಜಾಕ್ ಮಾಡುವ ಅಗತ್ಯ ನಮಗಿಲ್ಲ,ಪಕ್ಷಕ್ಕೆ ಬರುವವರನ್ನು ಬೇಡ ಎನ್ನುವುದಿಲ್ಲ:ಡಿಕೆಶಿ

ಈ ಸುದ್ದಿಯು ನಕಲಿಯಾಗಿದೆ ಮತ್ತು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಇಂತಹ ಯಾವುದೇ ಯೋಜನೆಗಳನ್ನು ಜಾರಿಮಾಡಿಲ್ಲ ಎಂದು ಟ್ವೀಟ್‌ ಮಾಡಿದೆ. ಈ ಯೋಜನೆಯ ಹೆಸರಿನಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಮಾಹಿತಿಗಳಾಗಿದ್ದು, ಅಂತಹ ನಕಲಿ ಸುದ್ದಿಗಳ ಬಗ್ಗೆ ಜಾಗೃತರಾಗಿರುವಂತೆ ಸಚಿವಾಲಯ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next