ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ನಾಲ್ವರು ಪ್ರಾಧ್ಯಾಪಕರನ್ನು ಒಳಗೊಂಡ ತಂಡ ಮೂರು ರಾಜ್ಯಗಳಲ್ಲಿ ಪಿಎಂ ಜನಧನ್ ಯೋಜನೆ ಕುರಿತು ಸಮೀಕ್ಷೆ ನಡೆಸಿ ಸಮಾಜ ವಿಜ್ಞಾನ ಸಂಶೋಧನೆಯ ಭಾರತೀಯ ಪರಿಷತ್ (ಐಸಿಎಸ್‌ಎಸ್‌ಆರ್)ಗೆ ವರದಿ ಸಲ್ಲಿಸಿದೆ.
ಅದರಲ್ಲಿ ಜನಧನ್ ಯೋಜನೆ ಯಶಸ್ಸು ಕಂಡಿದ್ದು ಬ್ಯಾಂಕ್ ಖಾತೆ ಹೊಂದಿರದ ಶೇ.98 ಮಂದಿಗೆ ಖಾತೆ ನೀಡಿದೆ ಎಂದು ಹೇಳಲಾಗಿದೆ. ಕರ್ನಾಟಕ ಸೇರಿ ರಾಜಸ್ಥಾನ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಆರು ತಿಂಗಳಿಂದ ಸಮೀಕ್ಷೆ ನಡೆಸಿದ್ದು, ವರದಿ ಸಿದ್ಧಪಡಿಸಿ ಐಸಿಎಸ್‌ಎಸ್‌ಆರ್‌ಗೆ ಸಲ್ಲಿಸಲಾಗಿದೆ. ಬೆಂಗಳೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊ.ಆರ್. ರಾಜೇಶ್, ಪ್ರೊ.ಎಸ್.ಆರ್.ಕೇಶವ, ಪ್ರೊ ಎಸ್.ವೈ.ಸುರೇಂದ್ರಕುಮಾರ್, ಡಾ.ಸುದೇಶ್ನಾ ಮುಖರ್ಜಿ ಅವರನ್ನು ಒಳಗೊಂಡ ತಂಡ ಈ ಸಮೀಕ್ಷೆ ನಡೆಸಿದೆ. ದೇಶದ ಎಲ್ಲ ನಾಗರಿಕರು ಬ್ಯಾಂಕ್ ಖಾತೆ ಹೊಂದಿ ಬ್ಯಾಂಕಿಂಗ್ ಸೌಲಭ್ಯ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಧಾನಿ ಮೋದಿ 2014ರಲ್ಲಿ ಪಿಎಂ ಜನಧನ್ ಯೋಜನೆ ಪ್ರಕಟಿಸಿದ್ದರು. ಈ ಯೋಜನೆ ಯಾವೆಲ್ಲ ಪರಿಣಾಮ ಬೀರಿದೆ, ಕಡು ಬಡ ಸಮುದಾಯಗಳಿಗೆ ಯೋಜ ನೆಯ ಲಾಭ ತಲುಪಿದೆಯೇ ಎಂದು ಮಾದರಿ ಸಮೀಕ್ಷೆ ಮೂಲಕ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನಲ್ಲಿ ತಂಡ ಅಧ್ಯಯನ ನಡೆಸಿದೆ.
ಅಧ್ಯಯನದ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿವಿಯ ಕುಲಪತಿ ಡಾ.ಎಸ್.ಎಂ.ಜಯಕರ, ವಿವಿಯ ಪ್ರಾಧ್ಯಾಪಕರ ತಂಡ ಜನಧನ್ ಯೋಜನೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿರುವುದು ಹೆಮ್ಮೆಯ ವಿಷಯ. ಜನಧನ್ ಯೋಜನೆಯ ಅನು ಷ್ಠಾನದ ವಾಸ್ತವತೆ ಪರಿಚಯಿ ಸುವ ಪ್ರಯತ್ನ ಮಾಡಿದ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಹ್ಯಾಕಿಂಗ್ ತಡೆಯುವ ಅಗತ್ಯವಿದೆ: ವರದಿ : ಪಿಎಂ ಜನಧನ್ ಯೋಜನೆಯ ಬ್ಯಾಂಕ್ ಖಾತೆ ಯಿಂದ ಹ್ಯಾಕಿಂಗ್ ಮೂಲಕ ಹಣ ಕಳುವಾಗಿ ರುವ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಸೂಕ್ತ ತಂತ್ರಜ್ಞಾನದ ಮೂಲಕ ಬ್ಯಾಂಕ್ ಖಾತೆ ಹ್ಯಾಕಿಂಗ್ ನಿಯಂತ್ರಿಸುವ ಅಗತ್ಯವಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಬ್ಯಾಂಕ್ ಖಾತೆ ತೆರೆದಿದ್ದರೂ ವಿಮೆ, ಓವರ್ ಡ್ರಾಫ್ಟ್ ಮುಂತಾದ ಬ್ಯಾಂಕಿಂಗ್ ಸೇವೆಗಳು ಸಾಮಾನ್ಯರಿಗೆ ತಲು ಪಿಲ್ಲ. ಈ ಬಗ್ಗೆ ಕೂಡ ಸೂಕ್ತ ಬದಲಾವಣೆ ಅಗತ್ಯವಿದೆ. ತೃತೀಯ ಲಿಂಗಿಗಳು ಖಾತೆ ತೆರೆ ಯಲು ಸಮಸ್ಯೆ ಬಗ್ಗೆ ವರದಿಯಲ್ಲಿ ಹೇಳಲಾಗಿದೆ.
– ಎನ್.ಎಸ್.ರಾಕೇಶ್