Advertisement

ಮುಂದಿನ ಬಾರಿ ಹಂಪಿ ಉತ್ಸವಕ್ಕೆ ಪ್ರಧಾನಿ ಮೋದಿಗೆ ಆಹ್ವಾನ: ಸಿ.ಟಿ.ರವಿ

10:23 AM Jan 11, 2020 | Sriram |

ಹಂಪಿ (ಬಳ್ಳಾರಿ):ಮುಂದಿನ ಹಂಪಿ ಉತ್ಸವ ಆಚರಣೆವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೇ ವಹಿಸಿದಲ್ಲಿ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿ ವೈಭವವಾಗಿ ಹಂಪಿ ಉತ್ಸವ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಕೇಂದ್ರದ ಪ್ರವಾಸೋದ್ಯಮ ಸಚಿವರಾದ ಪ್ರಹ್ಲಾದ್‌ಸಿಂಗ್‌ ಪಟೇಲರನ್ನು ಉತ್ಸವಕ್ಕೆ ಆಹ್ವಾನಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಪಾಲ್ಗೊಳ್ಳುತ್ತಿಲ್ಲ. ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ. ಅಂದಿನ ಕಾಲಘಟ್ಟದಲ್ಲಿ ನಮ್ಮ ಸನಾತನ ಕಲೆ, ಸಂಸ್ಕೃತಿ ಪರಂಪರೆಗಳು ವೈಭವದ ಪರಾಕಾಷ್ಠೆಗೆ ತಲುಪಿದ್ದವು. ಹಾಗಾಗಿ ವಿಜಯನಗರ ಸಾಮ್ರಾಜ್ಯ, ರಾಜ್ಯ-ದೇಶದ ಹೆಮ್ಮೆಯಾಗಿದ್ದು, ಇನ್ನೂ ಹೆಚ್ಚಿ ಸಂಖ್ಯೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗಳನ್ನು ಸೆಳೆಯುವಂತಾಗಬೇಕು ಎಂಬ ಹಂಬಲ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಹಂಪಿ ಉತ್ಸವ ಆಚರಣೆಗೆ ಸಂಬಂ ಧಿಸಿದಂತೆ ದಿನಾಂಕ ನಿಗದಿಪಡಿಸುವ ಕುರಿತು ಇತೀ¤ಚೆಗೆ ಚರ್ಚಿಸಲಾಗಿದೆ.

ಉತ್ಸವದ ಧಾರ್ಮಿಕ, ಐತಿಹಾಸಿಕ ಹಿನ್ನೆಲೆ ಪರಿಗಣಿಸಿ ಒಂದು ದಿನಾಂಕ ನಿಶ್ಚಯಿಸಲಾಗುವುದು. ಜತೆಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಹಂಪಿ ಉತ್ಸವವನ್ನು ಸೇರಿಸಲಾಗುವುದು. ಆಗ ಯಾವುದೇ ಗೊಂದಲ ಇರಲ್ಲ. ಜತೆಗೆ ನಿಶ್ಚಿತ ಅನುದಾನ ದೊರಕುವ ಯೋಜನೆಯನ್ನು ಸಹ ರೂಪಿಸಲಾಗುವುದು.

ವಿಜಯನಗರ ಜಿಲ್ಲೆ ಘೋಷಣೆಗೆ ಸಂಬಂಧಿ ಸಿದಂತೆ ಸಿಎಂ ಯಡಿಯೂರಪ್ಪನವರು ನಿರ್ಣಯ ಕೈಗೊಳ್ಳಲಿದ್ದಾರೆ. ವಿಜಯನಗರ ಜಿಲ್ಲೆ ಘೋಷಣೆಯಾಗಲಿದೆ ಎಂಬುದು ಕ್ಷೇತ್ರದ ಶಾಸಕರ ಹಂಬಲವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next