Advertisement
ಜೂ. 26 ನಮಗೆ ಪ್ರಜಾಪ್ರಭುತ್ವವನ್ನು ದಮನ ಮಾಡಲು ಯತ್ನಿಸಿದ ದಿನವನ್ನು ನೆನಪಿಸುತ್ತದೆ’-ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಜರ್ಮನಿಯ ಮ್ಯೂನಿಚ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಅವರು ಮಾತನಾಡಿದರು.
Related Articles
Advertisement
ಚಲ್ತಾ ಹೈ ನಿಲುವು ಇಲ್ಲ: ದೇಶದಲ್ಲಿ ಈಗ ಚಲ್ತಾ ಹೈ ನಿಲುವು ಇಲ್ಲ. ಅದರ ಬದಲಾಗಿ ಈಗ ಕೆಲಸ ಪೂರ್ಣವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಾಣ ಉಳಿಸಿದ ದೇಸಿ ಲಸಿಕೆ: ಭಾರತವು ಕೊರೊನಾ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಿ, ರಫ್ತು ಮಾಡಿದೆ. ಇಂದು ದೇಶದ ಶೇ. 90 ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಲಸಿಕೆ ಹಂಚಿಕೆಗೆ ಕನಿಷ್ಠ 10-15 ವರ್ಷ ಬೇಕೆಂದು ವಿರೋಧಿಗಳು ಪ್ರಾರಂಭದಲ್ಲಿ ದೂರಿದ್ದರು. ಆದರೆ ನಾವು ಎರಡೇ ವರ್ಷಗಳಲ್ಲಿ ಅದನ್ನು ಮಾಡಿ ತೋರಿಸಿದ್ದೇವೆ ಎಂದು ಅವರು ಹೇಳಿದರು.
ಅದ್ಧೂರಿ ಸ್ವಾಗತ: ರವಿವಾರ ಬೆಳಗ್ಗೆ ಜರ್ಮನಿಯ ಮ್ಯೂನಿಚ್‌ಗೆ ಬಂದಿಳಿದ ಮೋದಿಯವರಿಗೆ ಜರ್ಮನಿಯ ಆಡಳಿತ ಮತ್ತು ಅಲ್ಲಿನ ಭಾರತೀಯರು ಅದ್ಧೂರಿ ಸ್ವಾಗತ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಭಾರತೀಯರು “ಭಾರತ್ ಮಾತಾ ಕೀ ಜೈ’ ಘೋಷಣೆಗಳೊಂದಿಗೆ ಮೋದಿಯನ್ನು ಬರಮಾಡಿಕೊಂಡಿದ್ದಾರೆ. ಅಲ್ಲಿ ನೆರೆದಿದ್ದ ಪುಟಾಣಿಗಳೊಂದಿಗೆ ಪ್ರಧಾನಿಯವರು ಕೆಲ ಕಾಲ ಮಾತನಾಡಿದ್ದು, ಆ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ತಂಗುವ ಹೊಟೇಲ್‌ನಲ್ಲಿ ಎ.ಸಿ. ಇಲ್ಲ ಜರ್ಮನಿಯಲ್ಲಿರುವ ಪ್ರಧಾನಿ ಮೋದಿಯವರು ರವಿವಾರ ಜರ್ಮನಿಯ ದಕ್ಷಿಣ ಗಡಿ ಭಾಗದಲ್ಲಿರುವ ಪ್ರಸಿದ್ಧ ಸ್ಕೊ$Éàಸ್ ಎಲೌ¾ ಹೊಟೇಲ್‌ನಲ್ಲಿ ತಂಗಿದ್ದಾರೆ. ವಿಶೇಷವೆಂದರೆ ಈ ಹೊಟೇಲ್‌ನಲ್ಲಿ ಹವಾನಿಯಂತ್ರಿತ ಕೊಠಡಿಗಳಿಲ್ಲ. ಹಾಗೆಯೇ ಅದ್ಧೂರಿ ಕೊಠಡಿಗಳೂ ಇಲ್ಲ. ಗುಡ್ಡಗಾಡು ಪ್ರದೇಶದಲ್ಲಿರುವ ಹೊಟೇಲ್‌ಗೆ ಕೂಲರ್‌ಗಳನ್ನು ಬಳಕೆ ಮಾಡಲಾಗುತ್ತಿದೆ.