ನವದೆಹಲಿ: ಅಂತಾರಾಜ್ಯ ಆಯೋಗವನ್ನು ಪುನಾರಚಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾಗಿದ್ದಾರೆ.
ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಸದಸ್ಯರಾಗಿದ್ದಾರೆ. 6 ಮಂದಿ ಕೇಂದ್ರ ಸಚಿವರೂ ಸದಸ್ಯರಾಗಿದ್ದಾರೆ. ಇನ್ನು 10 ಕೇಂದ್ರ ಸಚಿವರು ಖಾಯಂ ಆಹ್ವಾನಿತರಾಗಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ, ಅಂತಾರಾಜ್ಯ ಆಯೋಗದ ಸ್ಥಾಯೀ ಸಮಿತಿಯನ್ನೂ ಪುನಾರಚಿಸಿದೆ. ಇದಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಮುಖ್ಯಸ್ಥರಾಗಿದ್ದು, ಆಯೋಗದಲ್ಲಿ ಪ್ರಸ್ತುತ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಎಸ್.ಜೈಶಂಕರ್, ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಷಿ ಸದಸ್ಯರಾಗಿದ್ದಾರೆ.
ಈ ಎರಡೂ ಸಮಿತಿಗಳ ಉದ್ದೇಶ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದು. ಹಾಗೆಯೇ ರಾಜ್ಯಗಳು ಮತ್ತು ಕೇಂದ್ರಗಳ ನಡುವೆ ಸಹಕಾರ ಹೆಚ್ಚಿಸುವುದು.
ಇದನ್ನೂ ಓದಿ:ನಾಗೇಶ್ ಇತಿಹಾಸದ ಕನಿಷ್ಠ ತಿಳುವಳಿಕೆ ಇಲ್ಲದ ಶಿಕ್ಷಣ ಸಚಿವ: ಬಿ.ಕೆ. ಹರಿಪ್ರಸಾದ್ ಕಿಡಿ
ಭಾರತ ಗಣರಾಜ್ಯ ಆಗಿರುವುದರಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ. ಅದನ್ನು ಸಾಧಿಸಲು ಇದನ್ನು ಮಾಡಲಾಗಿದೆ.