Advertisement

ಮಹಿಳಾ ಸ್ವಸಹಾಯ ಸಂಘಗಳಿಗೆ 1,625 ಕೋಟಿ ರೂ. ಬಿಡುಗಡೆ

09:07 PM Aug 12, 2021 | Team Udayavani |

ನವದೆಹಲಿ: “ಹಿಂದಿನ ಸರ್ಕಾರಗಳು ಮಹಿಳೆಯರ ಅಭಿವೃದ್ಧಿ ವಿಚಾರವನ್ನು ತೀವ್ರವಾಗಿ ನಿರ್ಲಕ್ಷಿಸಿದ್ದು, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮಹಿಳೆಯರ ಸಬಲೀಕರಣಕ್ಕಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ಹೊಸ ಹೆಜ್ಜೆಗಳನ್ನು ಇರಿಸಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಇದೇ ವೇಳೆ, ಸ್ವಸಹಾಯ ಸಂಘಗಳ ಮೂಲ ನಿಧಿಗಾಗಿ 1,625 ಕೋಟಿ ರೂ.ಗಳನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ. ಜೊತೆಗೆ, 7,500 ಎಸ್‌ಎಚ್‌ಜಿಗಳ ಸ್ವಾವಲಂಬನೆಗಾಗಿ ಪ್ರಧಾನಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳ ನಿಯಮಬದ್ಧ ಯೋಜನೆಯಡಿ 25 ಕೋಟಿ ರೂ. ಹಾಗೂ ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಸ್‌ಎಚ್‌ಜಿಗಳ ಮೂಲಧನವಾಗಿ 4.13 ಕೋಟಿ ರೂ.ಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು.

ಇದನ್ನೂ ಓದಿ:ಮೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ ರಣತಂತ್ರ

ಮಹಿಳಾ ಸ್ವಸಹಾಯ ಸಂಘಗಳ (ಎಸ್‌ಎಚ್‌ಜಿ) ಕಾರ್ಯಕರ್ತೆಯರ ಜೊತೆಗೆ ವರ್ಚುವಲ್‌ ಸಂವಾದ ನಡೆಸಿದ ಮೋದಿ, “ಬದಲಾದ ಭಾರತದಲ್ಲಿ ಮಹಿಳೆಯರು ಅಭಿವೃದ್ಧಿಗೊಳ್ಳಲು ನಾನಾ ಅವಕಾಶಗಳು ರೂಪುಗೊಂಡಿವೆ. ಅದರ ಪರಿಣಾಮವಾಗಿ, ಕಳೆದ ಆರೇಳು ವರ್ಷಗಳಲ್ಲಿ ದೇಶದ ನಾನಾ ಭಾಗಗಳಲ್ಲಿ ಸುಮಾರು 70 ಲಕ್ಷ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಕರ್ತೆಯರು ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ. ಇಂಥ ಸಂಘಗಳ ಸಂಖ್ಯೆ ಹಿಂದಿಗಿಂತ ಮೂರು ಪಟ್ಟು ಹೆಚ್ಚಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next