Advertisement

ಯುಪಿ ಸಿಎಂ ಯೋಗಿಗೆ ಹೊಸ ಬಿರುದು ಕೊಟ್ಟ ಪ್ರಧಾನಿ ಮೋದಿ!

05:26 PM Dec 18, 2021 | Team Udayavani |

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಫಿಯಾಗಳನ್ನು ನಿರ್ಮೂಲನೆ ಮಾಡಿದ್ದಾರೆ, ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಶ್ಲಾಘಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೊಸ ಬಿರುದು ನೀಡಿದ್ದಾರೆ.

Advertisement

ಉತ್ತರ ಪ್ರದೇಶದಲ್ಲಿ 594 ಕಿಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದ ನಂತರ ಪ್ರಧಾನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಉಪಯೋಗಿ’ ಯು ಪಿ ಪ್ಲಸ್ ಯೋಗಿ ಬಹುತ್ ಹೈ ಉಪಯೋಗಿ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಕೊಂಡಾಡಿದರು.

ಯೋಗಿ ಆಡಳಿತದಲ್ಲಿ ಕಳಪೆ ಕಾನೂನು ಸುವ್ಯವಸ್ಥೆ ಉತ್ತರ ಪ್ರದೇಶದಿಂದ ದೂರ ಸರಿಯಲು ಕಾರಣವಾಯಿತು, ಆದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬುಲ್ಡೋಜರ್‌ಗಳು ಮಾಫಿಯಾಗಳ ಅನಧಿಕೃತ ಆಸ್ತಿಗಳನ್ನು ಧ್ವಂಸಗೊಳಿಸಿದ್ದು, ಅವರನ್ನು ಬೆಂಬಲಿಸುವವರಿಗೆ ನೋವುಂಟು ಮಾಡಿದೆ ಎಂದು ಮೋದಿ ಹೇಳಿದರು.

36,230 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಆರು ಪಥಗಳ ಗಂಗಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ, ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಪೂರಕವಾಗಿದೆ. ಇದು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next