ಚೆನ್ನೈ/ಕೊಚ್ಚಿ: “ದಾಖಲೆ ಪ್ರಮಾಣದ ಆಹಾರ ಧಾನ್ಯ ಬೆಳೆದಿರುವ ರೈತರಿಗೆ ನನ್ನ ವಂದನೆಗಳು…’- ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ನಾಡಿನ ರೈತರಿಗೆ ಈ ಮೆಚ್ಚುಗೆ ಮಾತಿನ ಮೂಲಕ ಬೆನ್ನು ತಟ್ಟಿದರು. ಚೆನ್ನೈನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಅವರು, “ತ.ನಾಡಿನ ರೈತರು ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯ ಬೆಳೆದಿದ್ದಾರೆ. ಜಲ ಸಂಪನ್ಮೂಲಗಳನ್ನೂ ಉತ್ತ ಮ ವಾಗಿ ಬಳಸಿಕೊಂಡಿದ್ದಾ ರೆ’ ಎಂದು ಶ್ಲಾ ಘಿಸಿದರು.
“ನಾವು ಮಾಡುವ ಪ್ರತಿ ಕೃಷಿ ಚಟುವಟಿಕೆಗಳಲ್ಲೂ ನೀರನ್ನು ಸಂರಕ್ಷಿಸಬೇಕು. ಪರ್ ಡ್ರಾಪ್, ಮೋರ್ ಕ್ರಾಪ್ (ಕಡಿ ಮೆ ಹನಿ, ಹೆಚ್ಚು ಬೆಳೆ ) ನಮ್ಮ ಮಂತ್ರವಾಗಬೇ ಕು’ ಎಂದು ಕರೆ ನೀಡಿದರು.
ಮೆಟ್ರೋ ಗಿಫ್ಟ್: ಚೆನ್ನೈನಲ್ಲಿ ಮೆಟ್ರೋ 1ನೇ ಹಂತದ ವಿಸ್ತ ರಣಾ ಮಾರ್ಗಕ್ಕೆ ಚಾಲನೆ ನೀಡಿದ ಪ್ರಧಾನಿ, “ಚೆನ್ನೈ ಮೆಟ್ರೋ ವೇಗವಾಗಿ ಪ್ರಗತಿಯಾಗುತ್ತಿದೆ. 9 ಕಿ.ಮೀ. ವಿಸ್ತರ ಣೆಯಾಗುವ ಮೂಲಕ ಎಲ್ಲರಿಗೂ ಸಂತಸ ಮೂಡಿಸಿದೆ.
ಇಷ್ಟೇ ಅಲ್ಲದೆ, ಈ ವರ್ಷದ ಬಜೆಟ್ ನಲ್ಲಿ ಚೆನ್ನೈಗೆ 2ನೇ ಹಂತದ ಮೆಟ್ರೋ ಕಾಮಗಾರಿಗೆ 63 ಸಾವಿರ ಕೋಟಿ ರೂ. ನೀಡಲಾಗಿದೆ. ಬೇರೆಲ್ಲ ನಗರಗಳಿಗಿಂತ ಇಲ್ಲಿಗೆ ಹೆಚ್ಚಿನ ಅನು ದಾನ ಮೀಸಲಿಡಲಾಗಿದೆ’ ಎಂದು ವಿವರಿಸಿದರು.
ಲಂಕಾ ತಮಿಳರಿಗೆ ಬೆಂಬಲ: “ಶ್ರೀಲಂಕಾದಲ್ಲಿರುವ ತಮಿಳು ಸಹೋದರ, ಸಹೋದರಿಯರ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಕಾಳಜಿ ತೋರಿದೆ. ಅವರಿಗೆ ಭರವಸೆ ತುಂಬಲು ಜಾಫ್ನಾಕ್ಕೆ ತೆರಳಿದ ಮೊದಲ ಪ್ರಧಾನಿ ನಾನೆಂಬು ದಕ್ಕೆ ಹೆಮ್ಮೆ ಅನ್ನಿಸುತ್ತಿದೆ. ಲಂಕಾದಲ್ಲಿ ಚದುರಿ ಹೋಗಿರುವ ತಮಿಳರಿಗಾಗಿ 50 ಸಾವಿರ ಮನೆಗಳನ್ನು ನಿರ್ಮಿಸ ಲಾಗಿದೆ. ಜಾಫಾ° ಸಾಂಸ್ಕೃ ತಿಕ ಕೇಂದ್ರವನ್ನೂ ಶೀಘ್ರವೇ ತೆರೆಯಲಾಗುತ್ತಿ ದೆ’ ಎಂದು ತಿಳಿಸಿದರು.
“ಕರಾವಳಿ ತೀರದ ಅಭಿವೃದ್ಧಿಗೆ ಕೇಂದ್ರ ಬಜೆಟ್ ವಿಶೇಷ ಪ್ರಾಮುಖ್ಯತೆ ನೀಡಿದೆ. ಮೀನುಗಾರರಿಗೆ ಹೆಚ್ಚುವರಿ ಸಾಲ ಸೌಲಭ್ಯ ಅಲ್ಲದೆ, ಸಮುದ್ರಕಳೆ ಕೃಷಿಗೆ ಉತ್ತೇಜನದ ಮೂಲಕ ಆ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದೆ’ ಎಂದು ತಿಳಿಸಿದರು.
ನಮಸ್ಕಾರ ವಿನಿಮಯ: ಕೊಚ್ಚಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಪ್ರಧಾನಿ ಮೋದಿ ವೇದಿಕೆ ಹಂಚಿಕೊಂಡಿದ್ದರು. ವೇದಿಕೆಗೆ ಸಿಎಂ ಪಿಣರಾಯಿ ಆಗಮಿಸುತ್ತಿದ್ದಂತೆ ಪ್ರಧಾನಿಯವರಿಗೆ ಕೈ ಮುಗಿದು ನಮಸ್ಕರಿಸಿದರು. ಅದಕ್ಕೆ ಪ್ರಧಾನಿ ಯವರೂ ಸ್ಪಂದಿಸಿದರು. ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಕೇರಳಿಗರು ದೇಶದ ಗೌರವ ಹೆಚ್ಚಿಸುವಂತೆ ಮಾಡಿದ್ದಾರೆಂದು ಪ್ರಧಾನಿ ಶ್ಲಾಘಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳ ಜೈಲುಗಳಲ್ಲಿರುವ ಹಲವಾರು ಮಂದಿ ಭಾರತೀಯರನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಡುಗಡೆ ಮಾಡಿಸಿ ಸ್ವದೇಶಕ್ಕೆ ಬರುವಂತೆ ಹಲವು ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.