Advertisement

ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಇಂದು ಮಹತ್ವದ ಚರ್ಚೆ! ಲಾಕ್ ಡೌನ್ ಭವಿಷ್ಯ ನಿರ್ಧಾರ ?

08:10 AM Apr 28, 2020 | Mithun PG |

ಬೆಂಗಳೂರು: ದೇಶಾದ್ಯಂತ ಕೋವಿಡ್ 19 ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು (ಸೋಮವಾರ ಏ.27) ಎಲ್ಲಾ ರಾಜ್ಯಗಳ  ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಚರ್ಚೆ ನಡೆಸಲಿದ್ದಾರೆ.

Advertisement

ಈಗಾಗಲೇ ಕೋವಿಡ್ 19 ತಹಬದಿಗೆ ಬಾರದ ಕಾರಣ ಲಾಕ್​ಡೌನ್​ ಎರಡನೇ ಅವಧಿಯನ್ನು  ಮೇ 3ರವರೆಗೆ ವಿಸ್ತರಿಸಲಾಗಿದೆ. ಅದಾಗ್ಯೂ ಇಂದಿನ ಸಭೆಯಲ್ಲಿ ಮೇ 3ರ ಬಳಿಕ ಲಾಕ್​ಡೌನ್​ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ? ಲಾಕ್ ಡೌನ್ ನಿಂದ ಹಂತಹಂತವಾಗಿ ಹೊರಬರುವ ಮಾರ್ಗಗಳು  ಮತ್ತು ಪ್ರಸ್ಥುತ ಕೈಗೊಂಡಿರುವ ಕಾರ್ಯಗಳ ಬಗ್ಗೆ  ಸಂವಾದ ನಡೆಸಲಿದ್ದಾರೆ.

ಕೋವಿಡ್ 19 ಮಾಹಾಮಾರಿ ಆರಂಭಗೊಂಡಾಗಿನಿಂದ ಪ್ರಧಾನಿ, ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ಮೂರನೇ ವಿಡಿಯೋ ಕಾನ್ಫರೆನ್ಸ್ ಇದಾಗಿದೆ. ಈ ಸಂವಾದ ಬೆಳಗ್ಗೆ 11 ಗಂಟೆ ಸುಮಾರಿಗೆ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕೋವಿಡ್ ಅಟ್ಟಹಾಸಕ್ಕೆ ನಲುಗಿರುವ ಕೆಲವು ರಾಜ್ಯಗಳು ಲಾಕ್ ಡೌನ್ ಅವಧಿಯನ್ನು ಇನ್ನು ಕೆಲವು ದಿನಗಳ ಕಾಲ ಮುಂದುವರಿಸುವಂತೆ ಸಲಹೆ ನೀಡುವ ಸಾಧ್ಯತೆಯಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next