Advertisement

PM Housing Scheme; ಸಿನೆಮಾ ಕಾರ್ಮಿಕರಿಗೂ ಪಿಎಂ ಆವಾಸ್‌ ಮನೆ!

11:18 PM Sep 03, 2024 | Team Udayavani |

ಹೊಸದಿಲ್ಲಿ: ಪ್ರಧಾನ ಮಂತ್ರಿ ಆವಾಸ್‌ ಯೋಜನೆ(ಪಿಎಂಎವೈ) ವ್ಯಾಪ್ತಿಗೆ ವಲಸೆ ಕಾರ್ಮಿಕರು, ಸಿನೆಮಾ ರಂಗದ ಕಾರ್ಮಿಕರು ಸೇರಿ ಇತರರನ್ನು ಸೇರಿಸುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯು ಎಲ್ಲ ರಾಜ್ಯಗಳಿಗೆ ಕೇಳಿಕೊಂಡಿದೆ.

Advertisement

ಪಿಎಂಎವೈ ಯೋಜನೆಯನ್ನು 2024-25ರಿಂದ 2028-29ರ ವರೆಗೆ ವಿಸ್ತರಿಸುವ ಬಗ್ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಕಾರ್ಮಿಕ ಇಲಾಖೆ, ಆರ್ಥಿಕವಾಗಿ ದುರ್ಬಲವಾಗಿರುವ, ವಲಸೆ ಕಾರ್ಮಿಕರು, ಸಿನೆ ರಂಗದ ಕಾರ್ಮಿಕರು, ಬೀಡಿ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದವರನ್ನು ಸೇರಿಸುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರಕಾರ 2 ಕೋಟಿ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ.

ಪಿಎಂಎವೈ ವಿಸ್ತರಣೆ ಕುರಿತ ಸಂಬಂಧ ಈಗಾಗಲೇ ಪತ್ರಗಳನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿಕೊಡಲಾಗಿದೆ. ಕೇವಲ ಸಾಮಾಜಿಕ ನ್ಯಾಯಕ್ಕಾಗಿ ಮಾತ್ರವಲ್ಲದೇ ಅವರ ಬದುಕಿನ ಪರಿಸ್ಥಿತಿ ಸುಧಾರಣೆಗಾಗಿ ಆರ್ಥಿಕವಾಗಿ ದುರ್ಬಲವಾಗಿರುವ, ಸೌಲಭ್ಯ ವಂಚಿತರಿಗೆ ಪಿಎಂ ಆವಾಸ್‌ ಯೋಜನೆಯ ಲಾಭವನ್ನು ವಿಸ್ತರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.