Advertisement

ಅತ್ಯಧಿಕ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ: ಕಿರಿಯರಿಗೆ ಮೋದಿ ಕರೆ

08:44 AM May 07, 2019 | Team Udayavani |

ಹೊಸದಿಲ್ಲಿ : ಏಳು ರಾಜ್ಯಗಳಲ್ಲಿನ 51 ಲೋಕಸಭಾ ಕ್ಷೇತ್ರಗಳಿಗೆ ಇಂದು ಸೋಮವಾರ ನಡೆಯುತ್ತಿರುವ ಐದನೇ ಹಂತದ ಚುನಾವಣೆಯಲ್ಲಿ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿ ಬಂದು ಮತಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ವಿನಂತಿಸಿದ್ದಾರೆ.

Advertisement

ನಮ್ಮ ಪ್ರಜಾಸತ್ತೆಯನ್ನು ಬಲಪಡಿಸಲು ಮತ್ತು ದೇಶದ ಭವ್ಯ ಭವಿಷ್ಯಕ್ಕೆ ಕಾಣಿಕೆ ನೀಡಲು ಮತದಾನ ಅತ್ಯಂತ ಪರಿಣಾಮಕಾರಿ ಮಾರ್ಗ; ನನ್ನ ಕಿರಿಯ ಮಿತ್ರರು ದಾಖಲೆ ಸಂಖ್ಯೆಯಲ್ಲಿ ಮುಂದೆ ಬಂದು ಮತದಾನ ಮಾಡುತ್ತಾರೆ ಎಂಬ ವಿಶ್ವಾಸ ನನ್ನದು ಎಂದು ಮೋದಿ ಟ್ಟಿಟರ್‌ನಲ್ಲಿ ಬರೆದಿದ್ದಾರೆ.

ಇಂದು ನಡೆಯುತ್ತಿರುವ ಐದನೇ ಹಂತದ ಚುನಾವಣೆಯಲ್ಲಿ ದೊಡ್ಡ ದೊಡ್ಡ ರಾಜಕೀಯ ಹುದ್ದರಿಳೆನಿಸಿರುವ ರಾಜನಾಥ್‌ ಸಿಂಗ್‌, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮೊದಲಾದವರು ಕಣದಲ್ಲಿ ಇದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next