Advertisement

ಪ್ಲುಟೊ ಗ್ರಹ ನಿರ್ಜೀವವಲ್ಲ, ಸಜೀವ!

02:14 AM Mar 31, 2022 | Team Udayavani |

ಹೊಸದಿಲ್ಲಿ: 16 ವರ್ಷಗಳ ಹಿಂದೆ ಪ್ಲುಟೊ ಗ್ರಹವನ್ನು ಸಂಪೂರ್ಣ ನಿಷ್ಕ್ರಿಯ ಎಂದು ವಿಜ್ಞಾನಿಗಳು ಕರೆದಿದ್ದರು. ಅದಕ್ಕೀಗ ಜೀವ ಬಂದಿದೆ! ಇದಕ್ಕೆ ಕಾರಣ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯ ಹಾರಿಝನ್‌ ಮಿಷನ್‌ ಕಳುಹಿಸಿರುವ ಚಿತ್ರಗಳು.

Advertisement

ಇದರ ಆಧಾರದಲ್ಲಿ ವಿಜ್ಞಾನಿಗಳು ನೇಚರ್‌ ಕಮ್ಯುನಿ ಕೇಶನ್ಸ್‌ ಎಂಬ ನಿಯತಕಾಲಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ಲುಟೊ ಗ್ರಹದಲ್ಲಿ ಬೃಹತ್‌ ಹಿಮಗಡ್ಡೆಗಳ ಜ್ವಾಲಾಮುಖಿಯನ್ನೇ ಗುರುತಿಸಿದ್ದಾರೆ. ಇವು ಯಾವಾಗ ಬೇಕಾದರೂ ಸಿಡಿಯಬಹುದು. ಈ ಸಾಧ್ಯತೆಯೇ ಪ್ಲುಟೊಗೆ ಜೀವ ಇದೆ ಎಂದು ನಿರ್ಧಾರಕ್ಕೆ ಬರಲು ಕಾರಣ. ಈ ರೀತಿಯ ಒಂದು ಲಕ್ಷಣ ಸೌರವ್ಯೂಹದಲ್ಲೇ ಎಲ್ಲೂ ಕಂಡುಬಂದಿಲ್ಲವಂತೆ. 2006ರಲ್ಲಿ ಪ್ಲುಟೊ ಸಂಪೂರ್ಣ ಮಂಜುಗಟ್ಟಿದೆ. ಅದು ನಿಷ್ಕ್ರಿಯ, ಕುಬ್ಜ ಗ್ರಹ ಎಂದು ಅಂದಾಜಿಸಲಾಗಿತ್ತು. ಆ ವರ್ಷವೇ ಅಮೆರಿಕ ಹಾರಿಝನ್‌ ಮಿಷನ್‌ ಉಪಗ್ರಹ ವನ್ನು ಹಾರಿಬಿಟ್ಟಿತ್ತು. 2015ರಲ್ಲಿ ಅದು ಪ್ಲುಟೊವನ್ನು ತಲುಪಿತ್ತು.

ಹೇಗಿದೆ ಪ್ಲುಟೊ ಸ್ಥಿತಿ?: ಈ ಗ್ರಹದ ಕೆಲವು ಭಾಗಗಳಲ್ಲಿ ಪರ್ವತಗಳಿವೆ, ಕಣಿವೆಗಳಿವೆ, ಸಮತಟ್ಟು ಜಾಗವಿದೆ, ನೀರ್ಗಲ್ಲುಗಳಿವೆ. ಹಾಗೆಯೇ ಅಮೋನಿಯ, ನೀರು ಗಡ್ಡೆ ಕಟ್ಟಿರುವ ಜ್ವಾಲಾಮುಖಿಗಳಿವೆ. ದೊಡ್ಡ ದೊಡ್ಡ ಗುಮ್ಮಟ ಗಳಂತೆ ಇವು ರೂಪತಳೆದಿವೆ. 1ರಿಂದ 7 ಕಿ.ಮೀ.ವರೆಗೆ ಎತ್ತರ ಇವೆ. 30ರಿಂದ 100 ಕಿ.ಮೀ.ವರೆಗೆ ವಿಸ್ತಾರ ಇವೆ. ಕೆಲವು ಕಡೆ ಇವು ಒಂದರೊಳಗೊಂದು ಸೇರಿ ಕೊಂಡು ವಿಚಿತ್ರ ರೂಪ ಪಡೆದಿವೆ. ವಿಜ್ಞಾನಿಗಳ ಅಂದಾ ಜಿನ ಪ್ರಕಾರ ಪ್ಲುಟೊದ 1.2 ಲಕ್ಷ ಕಿ.ಮೀ. ಆಳದಲ್ಲಿ ಭಾರೀ ನೀರಿನ ಸಮುದ್ರಗಳೇ ಇವೆ! ಅಂದಾಜಿನ ಪ್ರಕಾರ ಪ್ಲುಟೊ ಒಳರಚನೆಯಲ್ಲಿ ಉಷ್ಣಾಂಶವಿದೆ.

ಅದರ ಪರಿಣಾಮ ಒಳಗಿರುವ ಹಿಮಗಡ್ಡೆಗಳು ಮೇಲೆ ಬರುತ್ತಿವೆ. ಮೇಲ್ಮೈಯಲ್ಲಿ ಹರಡಿಕೊಳ್ಳುತ್ತಿವೆ. ಈಗ ಸಿಕ್ಕಿರುವ ಹೊಸ ಕುರುಹುಗಳು ಪ್ಲುಟೊ ಜೀವಂತ ವಿರುವುದಕ್ಕೆ ಸಿಕ್ಕ ಸಾಕ್ಷ್ಯಗಳು.

Advertisement

Udayavani is now on Telegram. Click here to join our channel and stay updated with the latest news.

Next