Advertisement
ಸದ್ಯಕ್ಕೆ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಿಕೊಟ್ಟದ್ದು ತಾವೇ ಎಂದು ಜೆಡಿಯು, ಎನ್‌ಸಿಪಿ ಹಾಗೂ ಬಿಜೆಪಿ ಬಂಡಾಯ ಶಾಸಕ ನೊಬ್ಬ ಪೋಸು ಕೊಡುತ್ತಿದ್ದಾರೆ. ಇವರ ಲೆಕ್ಕದಲ್ಲಿ ತಮ್ಮ ಮತ ದಿಂದಲೇ ಅಹ್ಮದ್ ಪಟೇಲ್ ಗೆದ್ದದ್ದು, ಇಲ್ಲ ದಿದ್ದರೆ ಸೋತೇ ಬಿಡುತ್ತಿದ್ದರು ಎಂಬುದು ಇವ ರಲ್ಲಿನ ಭಾವನೆ. ಪಟೇಲ್‌ರನ್ನು ಗೆಲ್ಲಿಸಿಕೊಡುವ ಸಲುವಾಗಿಯೇ ಪಕ್ಷದ ವಿಪ್ ಉಲ್ಲಂ ಸಿದ್ದೇವೆ ಎಂದೂ ಎದೆ ತಟ್ಟಿಕೊಂಡೇ ಹೇಳುತ್ತಿದ್ದಾರೆ.
Related Articles
Advertisement
ಜೆಡಿಯು ಶಾಸಕ ಚೋಟು ವಾಸವ : ನಾನು ನಿತೀಶ್ ಕುಮಾರ್ ಹೇಳಿದ ಮಾತು ಕೇಳಿಲ್ಲ. ಪಕ್ಷದ ನಿರ್ದೇಶನ ಉಲ್ಲಂ ಸಿ ಅಹ್ಮದ್ ಪಟೇಲ್ ಅವರಿಗೇ ಮತ ಹಾಕಿದ್ದೇನೆ. ನನ್ನನ್ನು ನಂಬದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಆ 44ನೇ ಮತ ನನ್ನದೇ. ಅಹ್ಮದ್ ಪಟೇಲ್ ನನಗೆ 30 ವರ್ಷಗಳ ಪರಿಚಯ. ನಿತೀಶ್‌ಕುಮಾರ್, ಬಿಜೆಪಿ ಜತೆ ಸಖ್ಯ ಮಾಡಿಕೊಂಡಿದ್ದು ಇಷ್ಟವಿಲ್ಲದ ಕಾರಣದಿಂದಲೂ ಅಡ್ಡಮತ ಹಾಕಿದ್ದೇನೆ.
ಎನ್‌ಸಿಪಿ ಶಾಸಕ ಜಯಂತ್ ಪಟೇಲ್: ಎನ್‌ಸಿಪಿ ವಿಷಯದಲ್ಲಿ ಪಕ್ಷದ ವಿಪ್ ಉಲ್ಲಂ ಸಿದ್ದು ಇನ್ನೊಬ್ಬ ಶಾಸಕ. ಶರದ್ ಪವಾರ್ ಅವರು ಕಾಂಗ್ರೆಸ್‌ಗೆà ಮತಹಾಕುವಂತೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಪ್ರಫುಲ್ ಪಟೇಲ್ ಮಾತ್ರ ಈಗ ಕಾಂಗ್ರೆಸ್‌ಗೆ ನಮ್ಮ ನೆನಪಾಯಿತೋ ಎಂದು ಕೇಳಿದ್ದರು. ಹೀಗಾಗಿಯೇ ಮತ್ತೂಬ್ಬ ಶಾಸಕ ಕಾಂಧಲ್ ಜಡೇಜಾ ಬಿಜೆಪಿಗೇ ಮತಹಾಕುವುದಾಗಿ ಹೇಳಿದ್ದರು. ಆದರೆ ಮತದಾನದ ನಂತರ ಜಯಂತ್ ಪಟೇಲ್ ಕಾಂಗ್ರೆಸ್‌ನ ಅಹ್ಮದ್ ಪಟೇಲ್‌ಗೇ ವೋಟು ಹಾಕಿರುವುದಾಗಿ ಹೇಳಿದ್ದರು.
ಬಿಜೆಪಿ ಶಾಸಕ ನಳೀನ್ ಕೋಟಾಡಿಯಾ: ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ವಿಡಿಯೋ ಹರಿಬಿಟ್ಟ ಪಟೇಲ್ ಸಮುದಾಯದ ಬಿಜೆಪಿ ಶಾಸಕ ನಳೀನ್ ಕೋಟಾಡಿಯಾ ಅಹ್ಮದ್ ಪಟೇಲ್‌ಗೆ ಮತ ಹಾಕಿರುವುದಾಗಿ ಹೇಳಿದರು. ಬಿಜೆಪಿ ಪಟೇಲ್ ಸಮುದಾಯವನ್ನು ಸರಿ ಯಾಗಿ ನೋಡಿಕೊಳ್ಳದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದರು. ಆದರೆ ಇದನ್ನು ಬಿಜೆಪಿ ಅಲ್ಲಗೆಳೆದಿದ್ದು, ನಮ್ಮಿಂದ ಯಾರೂ ಅಡ್ಡಮತದಾನ ಮಾಡಿಲ್ಲ ಎಂದಿದೆ. ನಳೀನ್ ಪಟೇಲ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ ಈ ಮಾತು ಹೇಳಿರಬಹುದು ಎಂದೂ ಹೇಳಲಾಗಿದೆ.
ಜಿಪಿಪಿ ಶಾಸಕ: ಗುಜರಾತ್‌ನ ಸ್ಥಳೀಯ ಪಕ್ಷದ ಶಾಸಕರಾಗಿರುವ ಇವರೂ ಕಾಂಗ್ರೆಸ್‌ಗೆ ಮತಹಾಕುವುದಾಗಿ ಹೇಳಿಕೊಂಡಿದ್ದರು. ಆದರೆ ಇವರು ಯಾರಿಗೆ ಮತ ಹಾಕಿದ್ದಾರೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಕಡೆಗೆ ಇವರು ಮತ ಹಾಕಿದ್ದಾರೋ ಅಥವಾ ಗೈರಾಗಿದ್ದಾರೋ ಎಂಬುದೂ ಬಹಿರಂಗವಾಗಿಲ್ಲ.
ಪಟೇಲ್ ಗೆದ್ದರೂ ಕಾಂಗ್ರೆಸ್‌ಗೆ ಸಂಕಷ್ಟಗುಜರಾತ್ನಿಂದ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆದ್ದರೂ ಕಾಂಗ್ರೆಸ್ ಪಾಲಿಗೆ ಇದು ಒಳ್ಳೇ ಫಲಿತಾಂಶವೇನಲ್ಲ. ಏಕೆಂದರೆ, ಈಗಾಗಲೇ ಬಿಹಾರದಲ್ಲಿ ಕಾಂಗ್ರೆಸ್ ಕೈಬಿಟ್ಟಿರುವ ಜೆಡಿಯು ಒಂದಷ್ಟು ಆಘಾತ ನೀಡಿದೆ. ಆದರೆ, ಗುಜರಾತ್‌ನಲ್ಲಿ ಎನ್‌ಸಿಪಿ ಕೂಡ ಕೈಬಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೆ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಕೂಡ ಕಾಂಗ್ರೆಸ್ ವಿರುದ್ಧ ಖಾರವಾಗಿಯೇ ಮಾತನಾಡಿದ್ದಾರೆ. ಚುನಾವಣೆ ವೇಳೆಯಷ್ಟೇ ಕಾಂಗ್ರೆಸ್‌ಗೆ ನಮ್ಮ ಪಕ್ಷದ ನೆನಪಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎಲ್ಲ ವಿಪಕ್ಷಗಳನ್ನು ಒಟ್ಟಿಗೆ ಸೇರಿಸಿ 2019ಕ್ಕೆ ಲೋಕಸಭೆ ಚುನಾವಣೆ ಎದುರಿಸುವ ಕನಸಿಗೆ ಪೆಟ್ಟು ಬೀಳಬಹುದು ಎಂದೇ ಹೇಳಲಾಗುತ್ತಿದೆ. ಪಟೇಲ್ ಗೆದ್ದಿದ್ದು ಆ 2 ಮತಗಳಿಂದ
ಭಾರೀ ಉತ್ಸಾಹದಲ್ಲಿ ಬ್ಯಾಲೆಟ್ ತೋರಿಸಿ ಅಡ್ಡಮತ ಮಾಡಿದ ಆ ಇಬ್ಬರು ಕಾಂಗ್ರೆಸ್ ಶಾಸಕರು, ಈ ಉತ್ಸಾಹ ತೋರದೇ ಇದ್ದಿದ್ದರೆ ಅಹ್ಮದ್ ಪಟೇಲ್ ಸೋತೇ ಬಿಡುತ್ತಿದ್ದರು! ಈಗಾಗಲೇ ಮತ ಹಾಕಿದ್ದೇವೆ ಎಂದು ಹೇಳುತ್ತಿರುವ ಮೂವರಲ್ಲಿ ಇಬ್ಬರು ಸುಳ್ಳು ಹೇಳುತ್ತಿರುವುದು ಸಾಬೀತಾಗಿದೆ. ಆದರೆ, ಇಬ್ಬರು ಕಾಂಗ್ರೆಸ್ ಶಾಸಕರ ಮತ ಅಸಿಂಧು ಮಾಡದೇ ಹೋಗಿದ್ದರೆ ಮ್ಯಾಜಿಕ್ ನಂಬರ್ 45ಕ್ಕೆ ನಿಲ್ಲುತ್ತಿತ್ತು. ಆಗ ಅಹ್ಮದ್ ಪಟೇಲ್ ಒಂದು ಮತದ ಅಂತರದಿಂದ ಸೋಲುತ್ತಿದ್ದರು. ಏಕೆಂದರೆ, ಆಗ ಎರಡನೇ ಪ್ರಾಶಸ್ತ್ಯದ ಮತದ ಎಣಿಕೆಯಾಗಿ ಬಿಜೆಪಿಯ ಮೂರನೇ ಅಭ್ಯರ್ಥಿ ಗೆದ್ದುಬಿಡುತ್ತಿದ್ದರು!