Advertisement

ಪ್ಲೇ ಆಫ್: ಒಂದು ಸ್ಥಾನಕ್ಕೆ ನಾಲ್ಕು ತಂಡಗಳ ರೇಸ್‌

10:20 PM Oct 04, 2021 | Team Udayavani |

ಎಂಟು ಲೀಗ್‌ ಪಂದ್ಯಗಳು ಬಾಕಿ ಇರುವಾಗಲೇ 3 ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿರುವುದು 2021ನೇ ಐಪಿಎಲ್‌ ವೈಶಿಷ್ಟ್ಯ. ಚೆನ್ನೈ, ಡೆಲ್ಲಿ ಮತ್ತು ಬೆಂಗಳೂರು ಈ ಅದೃಷ್ಟಶಾಲಿಗಳು. ಹಾಗೆಯೇ ಒಂದು ತಂಡ ಕೂಟದಿಂದ ಹೊರಬಿದ್ದೂ ಆಗಿದೆ. ಈ ಸಂಕಟಕ್ಕೆ ಸಿಲುಕಿದ ತಂಡ ಹೈದರಾಬಾದ್‌. ಉಳಿದ ನಾಲ್ಕರಲ್ಲಿ ಒಂದು ತಂಡಕ್ಕಷ್ಟೇ ಪ್ಲೇ ಆಫ್ ಬಾಗಿಲು ತೆರೆಯಲಿದೆ. ಈ ಲಕ್ಕಿ ಟೀಮ್‌ ಯಾವುದಿರಬಹುದು, ಯಾರಿಗೆಷ್ಟು ಅವಕಾಶ ಲಭಿಸೀತು ಎಂಬ ಲೆಕ್ಕಾಚಾರ ಇಲ್ಲಿದೆ.

Advertisement

ಕೋಲ್ಕತಾ ನೈಟ್‌ರೈಡರ್:
13 ಪಂದ್ಯ, 12 ಅಂಕ
ನಾಲ್ಕರಲ್ಲಿ ಅತೀ ಹೆಚ್ಚಿನ ಅವಕಾಶ ಹೊಂದಿರುವ ತಂಡ ಕೆಕೆಆರ್‌. ಅದು 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಈ ಸ್ಥಾನ ಫಿಕ್ಸ್‌ ಆಗಬೇಕಾದರೆ ಉಳಿದ ಏಕಮಾತ್ರ ಪಂದ್ಯದಲ್ಲಿ ರಾಜಸ್ಥಾನ್‌ಗೆ ಸೋಲುಣಿಸಬೇಕಿದೆ. ಮಾರ್ಗನ್‌ಬಳಗ ರನ್‌ರೇಟ್‌ ಬಗ್ಗೆ ತಲೆ ಕೆಡಿಸಿಕೊಳ್ಳುವ ಯಾವ ಅಗತ್ಯವೂ ಇಲ್ಲ. ಉಳಿದೆಲ್ಲ ತಂಡಗಳು ಮೈನಸ್‌ನಲ್ಲಿದ್ದರೆ, ಕೆಕೆಆರ್‌ ಮಾತ್ರ ಪ್ಲಸ್‌ನಲ್ಲಿರುವುದೊಂದು ಪ್ಲಸ್‌ ಪಾಯಿಂಟ್‌. ಹೀಗಾಗಿ ಕೆಕೆಆರ್‌ ಸಣ್ಣ ಮಾರ್ಜಿನ್‌ನಲ್ಲಿ ಗೆದ್ದರೂ ಸಾಕು, ಪ್ಲೇ ಆಫ್ಪ್ರವೇಶಿಸಲಿದೆ.

ರಾಜಸ್ಥಾನ್‌ ರಾಯಲ್ಸ್‌:
12 ಪಂದ್ಯ, 10 ಅಂಕ
ರಾಜಸ್ಥಾನ್‌ ರಾಯಲ್ಸ್‌ ಕಳೆದ ಪಂದ್ಯದಲ್ಲಿ ಚೆನ್ನೈಯನ್ನು ಸೋಲಿಸುವ ಮೂಲಕ ರೇಸ್‌ನಲ್ಲಿ ಉಳಿದುಕೊಂಡಿದೆ. ಅದು 10 ಅಂಕ ಹೊಂದಿದ್ದು, ಇನ್ನೂ 2 ಪಂದ್ಯಗಳನ್ನು ಆಡಬೇಕಿದೆ. ಮುಂಬೈ ಮತ್ತು ಕೆಕೆಆರ್‌ ಎದುರಾಳಿಗಳು. ಈ ತಂಡಗಳೂ ಪ್ಲೇ ಆಫ್ ರೇಸ್‌ನಲ್ಲಿರುವುದರಿಂದ ಹೋರಾಟ ತೀವ್ರಗೊಳ್ಳಲಿದೆ. ಎರಡನ್ನೂ ಗೆದ್ದರೆ ಸ್ಯಾಮ್ಸನ್‌ ಬಳಗಕ್ಕೆ ಪ್ಲೇ ಆಫ್ ಬಾಗಿಲು ತೆರೆಯಲಿದೆ. ಅಕಸ್ಮಾತ್‌ ಅದು ಮುಂಬೈಗೆ ಶರಣಾದರೂ ಬಚಾವಾದೀತು, ಆದರೆ ಕೆಕೆಆರ್‌ ವಿರುದ್ಧ ಸೋಲಬಾರದು!

ಇದನ್ನೂ ಓದಿ:ಟಿ20 ವಿಶ್ವಕಪ್‌: ಶೇ. 70 ವೀಕ್ಷಕರಿಗೆ ಅವಕಾಶ

ಮುಂಬೈ ಇಂಡಿಯನ್ಸ್‌:
12 ಪಂದ್ಯ, 10 ಅಂಕ
ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಉಳಿದೆಲ್ಲ ತಂಡಗಳಿಗಿಂತ ಕೆಳ ಮಟ್ಟದಲ್ಲಿದೆ. ಆದರೆ ರಾಜಸ್ಥಾನದಂತೆ 2 ಪಂದ್ಯಗಳನ್ನು ಆಡುವ ಅವಕಾಶ ಹೊಂದಿದೆ. ಇದರಲ್ಲಿ ಒಂದು ಪಂದ್ಯವನ್ನು ರಾಜಸ್ಥಾನ್‌ ವಿರುದ್ಧವೇ ಆಡಬೇಕಿದೆ. ಇದನ್ನು ಗೆಲ್ಲುವುದು ಅತ್ಯಗತ್ಯ. ಇನ್ನೊಂದು ಎದುರಾಳಿ ಹೈದರಾಬಾದ್‌. ಎರಡನ್ನೂ ಗೆದ್ದರೆ ಅಂಕ 14ಕ್ಕೆ ಏರಲಿದೆ. ಆದರೆ ಅದು ರಾಜಸ್ಥಾನ್‌ ವಿರುದ್ಧ ಕೆಕೆಆರ್‌ನ ಸೋಲನ್ನು ಹಾರೈಸಬೇಕಿದೆ. ಹಾಗೆಯೇ ರನ್‌ರೇಟನ್ನೂ ಹೆಚ್ಚಿಸಿಕೊಳ್ಳಬೇಕಿದೆ.

Advertisement

ಪಂಜಾಬ್‌ ಕಿಂಗ್ಸ್‌:
13 ಪಂದ್ಯ, 10 ಅಂಕ
ಈ 4ರಲ್ಲಿ ಅತ್ಯಂತ ಕಠಿನ ಮಾರ್ಗದಲ್ಲಿ ಸಂಚರಿಸಬೇಕಿ ರುವ ತಂಡವೆಂದರೆ ಪಂಜಾಬ್‌ ಕಿಂಗ್ಸ್‌. ಅದು ಈಗಾಗಲೇ ಬಹುತೇಕ ನಿರ್ಗಮಿಸಿದೆ. ಆದರೂ ಕ್ಷೀಣ ಅವಕಾಶ ಇದೆ. ಅಂತಿಮ ಪಂದ್ಯದಲ್ಲಿ ಚೆನ್ನೈಯನ್ನು ಸೋಲಿಸುವ ಜತೆಗೇ ಉಳಿದ ಪಂದ್ಯಗಳ ಫ‌ಲಿತಾಂಶವನ್ನೂ ನಂಬಿ ಕೂರಬೇಕಿದೆ. ಇದೊಂದು ಜಿಗುಟು ಲೆಕ್ಕಾಚಾರ. ಮುಂಬೈ ರಾಜಸ್ಥಾನವನ್ನು ಮಣಿಸಬೇಕು, ರಾಜಸ್ಥಾನ್‌ ಕೋಲ್ಕತಾವನ್ನು ಸೋಲಿಸಬೇಕು, ಜತೆಗೆ ಮುಂಬೈಯನ್ನು ಹೈದರಾಬಾದ್‌ ಪರಾಭ ವಗೊಳಿಸಬೇಕು. ಆಗಷ್ಟೇ ಪಂಜಾಬ್‌ “ಕಿಂಗ್‌’ ಎನಿಸಲಿದೆ!

Advertisement

Udayavani is now on Telegram. Click here to join our channel and stay updated with the latest news.

Next